More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

    ಮೂಡಲಗಿ: ಪಟ್ಟಣದ ಸಮರ್ಥ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೋಮವಾರ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟಿಸಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

    ಈರಣ್ಣ ಕಡಾಡಿ ಮಾತನಾಡಿ, ಈ ಸಮಸ್ಯೆ ಕುರಿತು ಕಾರ್ಮಿಕ ಆಯುಕ್ತರ ಜತೆ ಮಾತನಾಡಿದ್ದು, ನಾಳೆಯಿಂದಲೇ ಮೂಡಲಗಿ ಹಾಗೂ ಗೋಕಾಕ ತಾಲೂಕಿಗೆ ಕಾರ್ಮಿಕ ನಿರೀಕ್ಷಕರನ್ನು ನಿಯುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಸಮರ್ಥ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ಸುಭಾಷ ಗೊಡ್ಯಾಗೋಳ ಮಾತನಾಡಿ, 5-6 ತಿಂಗಳಿನಿಂದ ಕಾರ್ಮಿಕರ ಹೊಸ ಕಾರ್ಡ್ ಹಾಗೂ ಕಾರ್ಡ್ ನವೀಕರಣ ಆಗುತ್ತಿಲ್ಲ,

    ಮೂಡಲಗಿ ತಾಲೂಕು ವ್ಯಾಪ್ತಿಯಲ್ಲಿ 7-8 ಸಾವಿರ ಕಾರ್ಮಿಕರಿದ್ದು, 6 ತಿಂಗಳಿಂದ ಕಾರ್ಮಿಕರ ನಿರೀಕ್ಷಕರಿಲ್ಲದೆ, ಕಾರ್ಮಿಕ ಇಲಾಖೆ ನೀಡುವ ವಿವಿಧ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಕಟ್ಟಡ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
    ಬಿಜೆಪಿ ಮುಖಂಡರಾದ ಪ್ರಕಾಶ ಮಾದರ ಹಾಗೂ ನಿಂಗಪ್ಪ ಫಿರೋಜಿ, ಸುಭಾಷ ಪೂಜೇರಿ, ರಮೇಶ ಉಪ್ಪಾರ ಹಾಗೂ ಈರಪ್ಪ ಧವಳೇಶ್ವರ ಮಾತನಾಡಿದರು. ಸಂಘದ ಅಧ್ಯಕ್ಷ ಬಸವರಾಜ ಪೋಳ, ಕಾನೂನು ಸಲಹೆಗಾರ ಲಕ್ಷ್ಮಣ ಅಡಿಹುಡಿ, ಮಸ್ತಾನ್ ಶೇಖ್, ವಿ.ಬಿ. ಸೊರಗಾವಿ, ರಾಮಚಂದ್ರ ಗುಡ್ಲಮನಿ, ವಸಂತ ಮೇತ್ರಿ, ಸಂಜು ಮುತ್ತೂರ, ನಾಗೇಶ ಸುಳ್ಳನವರ, ಕಿರಣ ಸಾನವಾಲೆ, ವಿಠ್ಠಲ ಗಸ್ತಿ, ಕಾಳಪ್ಪ ಬಡಿಗೇರ, ಪ್ರಮೋದ ಪಾಟೀಲ, ಇಲಿಯಾಸ್ ಜಮಾದಾರ್, ಸುಭಾಷ ಚೌಡಕಿ, ಮಲೀಕ್ ಸಮದಿ, ಉಮೇಶ ಕಲಾಲ, ರಮೇಶ ಜಂಡೆಕುರುಬರ, ಭರಮಪ್ಪ ಬಂಡಿವಡ್ಡರ, ಮಹಾಲಿಂಗ ಬಂಡಿವಡ್ಡರ, ಷಣ್ಮುಖ ಹಾದಿಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts