More

    ವಿಯೆಟ್ನಾಂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ  ನಮನ ಅಕಾಡೆಮಿ ಕಲಾವಿದರೆಯರು 

    ದಾವಣಗೆರೆ: ಇಲ್ಲಿನ ನಮನ ಅಕಾಡೆಮಿ ಹಾಗೂ ಅಷ್ಟಾಂಗ ವಿನ್ಯಾಸ ಇಂಟರ್‌ನ್ಯಾಷನಲ್ ಯೋಗ ಅಕಾಡೆಮಿ ಸಹಯೋಗದಲ್ಲಿ ಜೂ. 11ರಂದು ವಿಯೆಟ್ನಾಂ ದೇಶದ ಹೋ ಚಿ ಮೀನ್ ನಗರದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
    ವಿಶ್ವ ಯೋಗ ದಿನದ ಅಂಗವಾಗಿ ದಿ ವಿಯೋಗ ವರ್ಲ್ಡ್ ಸ್ಟಾರ್ ಆರ್ಟಿಸ್ಟಿಕ್ ಯೋಗ ಆ್ಯಂಡ್ ಇಂಟರ್‌ನ್ಯಾಷನಲ್ ಕಲ್ಚರಲ್ ಎಕ್ಸ್‌ಚೇಂಜ್ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ನಮನ ಅಕಾಡೆಮಿಯ ನೃತ್ಯ ಕಲಾವಿದೆಯರು ವಚನ, ಜಾನಪದ ಹಾಗೂ ಲಘು ಶಾಸ್ತ್ರೀಯ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತಪಡಿಸಲಿದ್ದಾರೆ.
    ಕಲಾವಿದೆಯರಾದ ವಿದುಷಿ ಡಿ.ಕೆ.ಮಾಧವಿ, ಪೂಜಾ ಆರ್. ಧಾಗೆ, ಎನ್.ಟಿ.ಪವನ್‌ಕುಮಾರ್, ಎಂ.ಮಂದಿರ, ಎಚ್.ಎಂ. ರಕ್ಷಾ, ಎನ್.ಅಕ್ಷರಾ, ಎನ್. ವಸುಂಧರಾ, ಬಿ.ಟಿ. ಗೌರಿ, ಹಂಸಿಕಾ ರವಿಕುಮಾರ್, ರುಹಿಕ ಸತೀಶ್ ಶೆಟ್ಟರ್ ಭಾಗವಹಿಸುವರು.
    ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು ಅಲ್ಲದೆ ವಿವಿಧೆಡೆಯ ಯೋಗಪಟುಗಳು ಹಾಗೂ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ನಮನ ಅಕಾಡೆಮಿ ಕಲಾವಿದರು ನಗರಕ್ಕೆ ಖ್ಯಾತಿ ತರಲೆಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಶುಭ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts