More

    ವಿಮಾ ಕಂತಿನ ಹಣ ಬಿಡುಗಡೆಗೊಳಿಸಿ

    ರೋಣ: ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತಿನ ಹಣ ಪಾವತಿಸದಿರುವುದು ಹಾಗೂ ರೈತರಿಗೆ ಯೂರಿಯಾ ರಸಗೊಬ್ಬರ ಸಿಗದಿರುವುದನ್ನು ಖಂಡಿಸಿ ರೈತ ಮುಖಂಡರು ಶನಿವಾರ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ ಅವರಿಗೆ ಮನವಿ ಸಲ್ಲಿಸಿದರು.

    ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ ಸುಂಕದ ಮಾತನಾಡಿ, ‘ವಿಮಾ ಕಂಪನಿಗಳು ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಹಣ ಭರಿಸಲು ವಿಳಂಬ ಧೋರಣೆ ಅನುಸರಿಸುತ್ತಿವೆ’ ಎಂದು ಆರೋಪಿಸಿದರು.

    ರೈತ ಶರಣಪ್ಪ ಮಲ್ಲಾಪೂರ ಮಾತನಾಡಿ, ತಾಲೂಕಿನಾದ್ಯಂತ 15 ದಿನಗಳಿಂದ ರಸಗೊಬ್ಬರ ಅಭಾವ ಉಂಟಾಗಿವೆ. ಆದರೂ, ಯೂರಿಯಾ ಪೂರೈಕೆಯಾಗುತ್ತಿಲ್ಲ. ಸೂಕ್ತ ಸಮಯದಲ್ಲಿ ಬೆಳೆಗಳಿಗೆ ಯೂರಿಯಾ ಗೊಬ್ಬರ ನೀಡದಿದ್ದರೆ ಇಳುವರಿ ಬರುವುದಿಲ್ಲ ಎನ್ನುವ ಆತಂಕ ರೈತರದ್ದು. ಹೀಗಾಗಿ ಸರ್ಕಾರ ಈ ಕೂಡಲೆ, ಅಗತ್ಯವಿರುವ ಯೂರಿಯಾ ರಸಗೊಬ್ಬರವನ್ನು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

    ಈ ವೇಳೆ ರಾಜು ಗಿರಡ್ಡಿ, ಭೀಮಪ್ಪ ಕಡಿವಾಲ, ಹನುಮಂತಗೌಡ ಉಸಲಕೊಪ್ಪ, ಬಸವರಾಜ ಉಸಲಕೊಪ್ಪ, ಶರಣಪ್ಪ ಜಿಗಳೂರ, ಶರಣಯ್ಯ ಹಿರೇಮಠ, ಖಾಜೇಸಾಬ್ ಹುಜರತ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts