More

    ವಿದ್ಯಾರ್ಥಿಮಿತ್ರ ಬಹುಪಯೋಗಿ

    ಮೇಖಳಿ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ವಿದ್ಯಾರ್ಥಿಗಳು ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ ಎಂದು ಮುಖ್ಯ ಶಿಕ್ಷಕಿ ವೀರಶ್ರೀ ಸಮಾಜೆ ಹೇಳಿದರು.

    ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಗಳನ್ನು ಗುರುವಾರ ಹಂಚಿಕೆ ಮಾಡಿ ಮಾತನಾಡಿ, ಪಠ್ಯದ ಜತೆಗೆ ಪ್ರಚಲಿತ ಘಟನೆಗಳನ್ನು ತಿಳಿದು ಅವುಗಳನ್ನು ಪಟ್ಟಿಮಾಡಿ ಅಧ್ಯಯನ ಮಾಡಿ. ಇದರಿಂದ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸರಳವಾಗಿ ಎದುರಿಸಬಹುದು ಎಂದರು.

    ಚಿತ್ರಕಲಾ ಶಿಕ್ಷಕಿ ಸರಸ್ವತಿ ಪತ್ತಾರ, ಸಹ ಶಿಕ್ಷಕರಾದ ಎಸ್.ಜಿ. ಖೋತ, ಯು.ಡಿ.ಖೋತ, ಎಂ.ಎಚ್.ಪಾಟೀಲ, ಎಂ.ಬಿ. ಸಿಂಧೆ, ಆರತಿ ಕಾಂಬಳೆ, ಸುನಿತಾ ನಾಯಿಕ, ಅನ್ನಪೂರ್ಣಾ ಅಳಗೋಡಿ, ಸರಸ್ವತಿ ಅಲಕನೂರೆ, ಮಾಲತಿ ಪರಾಂಜಪೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts