More

    ವಿದ್ಯಾರ್ಥಿಗಳು ಪಾಠದ ಜತೆ ಕ್ರೀಡೆಗಳಲ್ಲೂ ಭಾಗವಹಿಸಿ

    ಬೆಳಗಾವಿ: ವಿದ್ಯಾರ್ಥಿಗಳು ಕಲಿಕೆ ಜತೆಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸಿಕವಾಗಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿಸಬೇಕು ಎಂದು ಮರಾಠ ಎಲ್‌ಐ ಆರ್‌ಸಿ ಕಮಾಂಡೆಂಟ್ ಹಾಗೂ ವಿಎಂಸಿ ಅಧ್ಯಕ್ಷ ಜೋಯ್ದೀಪ್ ಮುಖರ್ಜಿ ಹೇಳಿದರು.

    ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ-2 ಕ್ರೀಡಾಂಗಣದಲ್ಲಿ ಮಂಗಳವಾರ 40ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಪಾಲಕರು ತಮ್ಮ ಸಂಪೂರ್ಣ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಶಾಲೆಯ ಲಭ್ಯವಿರುವ ಗರಿಷ್ಠ ಸಂಪನ್ಮೂಲ ಬಳಸಿಕೊಳ್ಳಬೇಕು. ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಕ್ಕಾಗಿ ಶಿಕ್ಷಕರು ಶ್ರಮಿಸಬೇಕು ಎಂದರು. ಪ್ರಾಂಶುಪಾಲ ಎಸ್.ಶ್ರೀನಿವಾಸ ರಾಜಾ ಶಾಲಾ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿಗಳು ಪಥ ಸಂಚಲನ ಪ್ರಸ್ತುತಪಡಿಸಿದರು. ನಂತರ ಪ್ರಾದೇಶಿಕ ಮತ್ತು ರಾಷ್ಟ್ರೀಯ ಕ್ರೀಡಾ ಆಟಗಾರರ 26 ವಿದ್ಯಾರ್ಥಿಗಳು ಜ್ಯೋತಿಯೊಂದಿಗೆ ಓಡಿದರು. 6, 8 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ವರ್ಣರಂಜಿತ ಪಿಟಿ ವ್ಯಾಯಾಮಗಳು, ಹೂಪ್ಸ್ ಮತ್ತು ಡಂಬಲ್ಸ್ ವ್ಯಾಯಾಮಗಳನ್ನು ಕ್ರಮವಾಗಿ ಪ್ರದರ್ಶಿಸಿದರು. ಕೇಂದ್ರೀಯ ವಿದ್ಯಾಲಯದ ಜೀವಶಾಸ್ತ್ರದ ಜಿ.ಕೆ.ವಿನಾಗಯಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts