More

    ವಾಹನದ ದಂಡ ಪ್ರಕರಣದಲ್ಲಿ ಶೇ.50 ರಿಯಾಯಿತಿ

    ರಾಮದುರ್ಗ: ವಾಹನ ಸವಾರರ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವಿಧಿಸಿದ ದಂಡದ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಶೇ. 50 ರಿಯಾಯಿತಿ ನೀಡಲಾಗುತ್ತಿದೆ. ಫೆ.11 ವರೆಗೆ ಮಾತ್ರ ರಿಯಾಯಿತಿ ಅನ್ವಯವಾಗಲಿದೆ. ವಾಹನ ಸವಾರರು ಸದ್ಬಳಕೆ ಮಾಡಿಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸ್ಥಳೀಯ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶ ಹಣಮಂತ ಜಿ.ಎಚ್. ಹೇಳಿದರು.

    ಪಟ್ಟಣದ ಕೋರ್ಟ್ ಹಾಲ್‌ನಲ್ಲಿ ಪೊಲೀಸ್ ಇಲಾಖೆ, ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಹಾಗೂ ಮಾಧ್ಯಮದವರೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದಂಡ ವಿಧಿಸಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಾನೂನು ಪ್ರಾಧಿಕಾರದ ಮೂಲಕ ಸರ್ಕಾರದ ನಿಯಮಾನುಸಾರ ವಿಧಿಸಿದ ದಂಡದಲ್ಲಿ ಶೇ. 50 ರಿಯಾಯಿತಿ ನೀಡಲಾಗುತ್ತಿದೆ. ಇನ್ನುಳಿದ ಶೇ. 50 ಮೊತ್ತವನ್ನು ಮಾತ್ರ ಪಕ್ಷಗಾರರು ತುಂಬಬೇಕಾಗುತ್ತದೆ ಎಂದರು.

    ಫೆ.11ರಂದು ಇನ್ನುಳಿದ ಸಿವ್ಹಿಲ್ ಸೇರಿದಂತೆ ನ್ಯಾಯಾಲಯದ ರಾಜೀ ಮಾಡಿಕೊಳ್ಳಬಹುದಾದ ಯಾವುದೇ ಪ್ರಕರಣಗಳನ್ನು ಇತ್ಯರ್ಥಮಾಡಿಕೊಳ್ಳಲು ಲೋಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನತೆ ಫೆ.11 ರೊಳಗಾಗಿ ವಕೀಲರ ಮುಖಾಂತರ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ, ಬಾಕಿ ಉಳಿದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು. ರಾಜೀಸಂಧಾನದ ಮೂಲಕ ಪ್ರಕಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ ಹಾಗೂ ಸರ್ವರು ಕಾನೂನು ಗೌರವಿಸಿದಲ್ಲಿ ಮಾತ್ರ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಇಳಿಮುಖಗೊಳ್ಳಲಿದೆ ಎಂದರು. ಹೆಚ್ಚಿನ ಮಾಹಿತಿಗಾಗಿ, ಮೊ. 8296796278, 8050644574 ಸಂಪರ್ಕಿಸುವಂತೆ ನ್ಯಾಯಾಧೀಶ ಹಣಮಂತ ಜಿ.ಎಚ್. ತಿಳಿಸಿದರು.

    ಕಿರಿಯ ದಿವಾಣಿ ನ್ಯಾಯಾಧೀಶರಾದ ಸುಖಿತಾ ಹದ್ಲಿ, ನ್ಯಾವಾದಿಗಳ ಸಂಘದ ಅಧ್ಯಕ್ಷ ಆರ್. ಈ. ವಜ್ರಮಟ್ಟಿ, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts