More

    ವಾಹನಕ್ಕೆ ಚಾಲಕರನ್ನು ನೇಮಿಸಿ

    ಸಂಬರಗಿ: ಸಮರ್ಪಕ ಕಸ ವಿಲೇವಾರಿಗೆ ನೀಡಲಾಗಿದ್ದ ಕಸದ ವಾಹನಗಳನ್ನು ಚಲಾಯಿಸಲು ಚಾಲಕರ ಸಮಸ್ಯೆ ಎದುರಾಗಿರುವುದರಿಂದ ಅಥಣಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

    ತಾಲೂಕಿನಲ್ಲಿ 46 ಗ್ರಾಮ ಪಂಚಾಯಿತಿಗಳಿವೆ. ಪ್ರತಿ ಗ್ರಾಮ ಪಂಚಾಯಿತಿಗೊಂದು ಕಸ ವಿಲೇವಾರಿ ವಾಹನ ನೀಡಲಾಗಿದೆ. ಈಗ ವಾಹನ ಚಾಲಕರಿಲ್ಲದೇ ಕಸ ವಿಲೇವಾರಿ ಸ್ಥಗಿತಗೊಂಡಿದೆ. ಚಾಲಕರಿಲ್ಲದ ಕಾರಣ ವಾಹನ ಇದ್ದು ಇಲ್ಲದಂತಾಗಿವೆ. ಕಸ ಸಂಗ್ರಹಗೊಂಡು ಗ್ರಾಮಗಳಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಪ್ರತಿ ಕುಟುಂಬಕ್ಕೆ ಹಸಿ ಹಾಗೂ ಒಣ ಕಸ ಸಂಗ್ರಹ ಮಾಡಿ ಬೇರ್ಪಡಿಸಲು ನೀಡಲಾದ ಬಕೆಟಗಳೂ ಸಹ ಮೂಲೆ ಸೇರಿವೆ.

    ಸಿಬ್ಬಂದಿ ನೇಮಕವಿಲ್ಲ: ಸರ್ಕಾರ ಮಹಿಳಾ ಸ್ವಸಹಾಯ ಸಂಗಳಲ್ಲಿದ್ದವರನ್ನೇ, ವಾಹನ ಚಾಲನಾ ತರಬೇತಿ ನೀಡಿ ಚಾಲಕರೆಂದು ನೇಮಿಸಿಕೊಳ್ಳಲು ಆಯಾ ಗ್ರಾಮ ಪಂಚಾಯತಿಗೆ ಆದೇಶ ನೀಡಿದ್ದರೂ, ನೇಮಕಾತಿ ಪ್ರಕಿಯೆಗಿನ್ನೂ ಚಾಲನೆ ಸಿಕ್ಕಿಲ್ಲ.

    ಕಷ್ಣಾ ನದಿ ಹೋರಾಟ ಸಮಿತಿ ಅಧ್ಯ ಬಸಗೌಡ ಪಾಟೀಲರಿಗೆ ಸಂಪರ್ಕಿಸಿದಾಗ ಕಸ ವಿಲೇವಾರಿ ವಾಹನ ಚಾಲಕರನ್ನು ಶ್ರೀ ನೇಮಕ ಮಾಡಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts