More

    ವರುಣನ ಆರ್ಭಟಕ್ಕೆ ರಸ್ತೆ, ಕೃಷಿ ಭೂಮಿಗೆ ಹಾನಿ

    ಜಯಪುರ: ಮೇಗುಂದಾ ಹೋಬಳಿಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಮಳೆ ತೀವ್ರತೆಗೆ ಹಲವು ಕಡೆಗಳಲ್ಲಿ ರಸ್ತೆ, ಕೃಷಿ ಭೂಮಿ ಹಾನಿಯಾಗಿದೆ. ಕೆಲವುಕಡೆ ಗ್ರಾಮಗಳನ್ನು ಸಂರ್ಪಸುವ ರಸ್ತೆಗಳು ಬಿರುಕು ಬಿಟ್ಟಿದೆ.

    ಸತತ ಮಳೆಯಿಂದ ಹಳ್ಳ, ಕೊಳ್ಳಗಳು, ಚರಂಡಿ ತುಂಬಿ ಹರಿಯುತ್ತಿವೆ. 15ಕ್ಕೂ ಹೆಚ್ಚು ಗ್ರಾಮಗಳು ಹಾಗೂ ಜಯಪುರ-ಬಸರೀಕಟ್ಟೆ-ಹೊರನಾಡು ಸಂರ್ಪಸುವ ರಸ್ತೆ ತೀರ್ಥಕೆರೆ ಸಮೀಪ ಬಿರುಕು ಬಿಟ್ಟಿದ್ದು, ರಸ್ತೆ ಬದಿ ಮಣ್ಣು ಕುಸಿಯುತ್ತಿದೆ. ಮಣ್ಣಿನ ಕುಸಿತ ಮುಂದುವರಿದರೆ ಸಂಪೂರ್ಣ ಬಂದ್ ಆಗುವ ಸಂಭವವಿದೆ. ಕೊಗ್ರೆ ಸೇತುವೆ ಕುಸಿದು ಗ್ರಾಮೀಣ ಪ್ರದೇಶಗಳು ಸಂಪರ್ಕ ಕಡಿತಗೊಂಡಿದೆ. ಮತ್ತೆ ಮಳೆ ಆರಂಭವಾಗಿದ್ದು, ರಸ್ತೆ ಬಂದ್ ಆದರೆ ಪರ್ಯಾಯ ರಸ್ತೆ ಇಲ್ಲದಿರುವುದರಿಂದ ಸಂಕಷ್ಟ ಎದುರಾಗಲಿದೆ. ಇಲ್ಲಿನ ಗ್ರಾಮಗಳಿಂದ ಶೃಂಗೇರಿ, ಜಯಪುರದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.

    ಜಯಪುರ-ಬಸರೀಕಟ್ಟೆ ರಸ್ತೆ ಸುಮಾರು 15ಕ್ಕಿಂತ ಹೆಚ್ಚು ಹಳ್ಳಿಗಳನ್ನು ಸಂರ್ಪಸುತ್ತದೆ. ಈ ಹಿಂದಿನ ಮಳೆಯಿಂದ ಕೊಗ್ರೆ ಸೇತುವೆ ಕುಸಿದಿತ್ತು. ಈಗ ಜಯಪುರ, ಕೊಗ್ರೆ ಸಂರ್ಪಸುವ ರಸ್ತೆಯಲ್ಲೂ ಬಿರುಕು ಮೂಡಿರುವುದು ಆತಂಕ ಮೂಡಿಸಿದೆ. ಈ ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ಜನ ಬಸರಿಕಟ್ಟೆ- ಹೇರೂರು ರಸ್ತೆ ಮೂಲಕ 35 ಕಿಮೀ ಸಂಚರಿಸಿ ಜಯಪುರ ತಲುಪುವ ಸ್ಥಿತಿ ನಿರ್ವಣವಾಗಲಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಗ್ರಾಮಸ್ಥ ಸೈಮನ್ ಡಿಸೋಜ ಒತ್ತಾಯಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts