More

    ಲೋಕಾಯುಕ್ತ ಸಂಸ್ಥೆ ಬಲಪಡಿಸಿ

    ಬಾಗಲಕೋಟೆ: ನ್ಯಾಯಾಲಯದ ಮಹತ್ವದ ಆದೇಶ ಬಳಿಕ ಲೋಕಾಯುಕ್ತ ಸಂಸ್ಥೆಗೆ ಮರು ಜೀವ ಬಂದಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರವು ಲೋಕಾಯುಕ್ತವನ್ನು ಬಲಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದರು.
    ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಲೋಕಾಯುಕ್ತ ಬಲಹೀನಗೊಳಿಸಿ ಎಸಿಬಿ ಸ್ಥಾಪನೆಗೊಳಿಸಿತ್ತು. ಮತ್ತೆ ಅಕಾರಕ್ಕೆ ಬಂದರೆ ಬಿಜೆಪಿ ಲೋಕಾಯುಕ್ತ ಸಂಸ್ಥೆ ಬಲಪಡಿಸುವುದಾಗಿ ಹೇಳಿತ್ತು. ನಾಲ್ಕು ವರ್ಷವಾದರು ಆ ಕಾರ್ಯ ಮಾಡಲಿಲ್ಲ. ಇದೀಗ ಆರು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದರ ಫಲವಾಗಿ ನ್ಯಾಯಾಲಯವು ಮಹತ್ವದ ಆದೇಶ ನೀಡಿವುದು ಸಂತೋಷ ತಂದಿದೆ. ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿಯಾನಕ್ಕೆ ಎಲ್ಲರು ಕೈ ಜೋಡಿಸಬೇಕು. ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಅರ್ಹರನ್ನು ನೇಮಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಲೋಕಾಯುಕ್ತ ವಿಷಯದಲ್ಲಿ ಸರ್ಕಾರ ತೆಲೆ ಹಾಕಬಾರದು. ನೇಮಕ ಮಾಡಿದ ಸಿಬ್ಬಂದಿಯನ್ನು ಮೂರು ವರ್ಷಗಳ ಕಾಲ ವರ್ಗಾವಣೆ ಮಾಡಬಾರದು. ಉನ್ನತ ಅಧಿಕಾರಿ, ಜನಪ್ರಿನಿಧಿಗಳ ಮೇಲೆ ಕೇಸ್ ದಾಖಲಿಸಲು ನಿರ್ಬಂಧ ಹಾಕಬಾರದು. ಲೋಕಾಯುಕ್ತರಿಗೆ ಪ್ರಕರಣಗಳ ತನಿಖೆ ನಡೆಸಲು ಅವಕಾಶ ನೀಡಿದೆ. ತನಿಖಾ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ವರದಿ ನೀಡಬೇಕು ಎಂದ ಅವರು, ಲೋಕಾಯುಕ್ತ ಸಂಸ್ಥೆಗೆ ನೇಮಕಗೊಂಡವರು ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
    ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಯುತ್ತಿದೆ. ಸದಾ ಜಾಗೃತರಾಗಿ ಸಾರ್ವಜನಿಕರು ಕೆಲಸ ಮಾಡಬೇಕು. ನ.24 ರಿಂದ ಆಶಾದೀಪ ಸಂಸ್ಥೆ ಹಾಗೂ ಜನಾಂದೋಲನ ಮಹಾಮೈತ್ರಿಯಿಂದ ಜನ ಜಾಗೃತಿ ಯಾತ್ರೆ ಕೂಡಲಸಂಗಮದಿಂದ ಆರಂಭಿಸಲಾಗುವುದು. ನ.25 ಕ್ಕೆ ಬಾಗಲಕೋಟೆಗೆ ಆಗಮಿಸಲಿದೆ. ನಂತರ ನರಗುಂದ, ಧಾರವಾಡ, ಗದಗದ ಕಪ್ಪತಗುಡ್ಡ, ಹರಿಹರ, ತುಮಕೂರು, ನೆಲಮಂಗಲ ಮೂಲಕ ಸಂಚರಿಸಿ ಬೆಂಗಳೂರು ತಲುಪಲಿದೆ ಎಂದು ತಿಳಿಸಿದರು.
    ಭ್ರಷ್ಟಾಚಾರ ವಿಷಯದಲ್ಲಿ ನಮ್ಮ ರಾಜ್ಯ ಈ ಹಿಂದೆ ಮರ್ಯಾದೆ ಕಳೆದುಕೊಂಡಿದೆ. ಈಗಲು ಲೋಕಸಭೆ, ವಿಧಾನಸಭೆಯಲ್ಲಿ ಶೇ.40 ಜನಪ್ರತಿನಿಧಿಗಳು ಕ್ರಿಮಿನಲ್ ಹಿನ್ನಲೆ ಉಳ್ಳವರು ಇದ್ದಾರೆ. ಇವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುಗಳು ಇವರಿಗೆ ತಕ್ಕ ಪಾಠ ಕಲಿಸಬೇಕು. ಈ ಹಿಂದೆ ಸಂತೋಷ ಹೆಗಡೆ ಲೋಕಾಯುಕ್ತರಿದ್ದಾಗ ಕೈಗೊಂಡ ಕ್ರಮಗಳಿಂದ ಸಿಎಂ ಯಡಿಯೂರಪ್ಪ, ಗಣಿದಣಿಗಳು ಜೈಲು ಸೇರಿದರು. ಆ ರೀತಿ ದಿಟ್ಟ ಕ್ರಮ ಇಂದು ಅಗತ್ಯವಿದೆ. ರಾಜ್ಯದಲ್ಲಿ ಶೇ.40 ಪರ್ಸೆಂಟ ಕಮಿಷನ್ ಸರ್ಕಾರವಿದೆ ಅಂತ ಆರೋಪವಿದೆ. ಈ ಬಗ್ಗೆ ತನಿಖೆ ಆಗಬೇಕು. ಕೊಟ್ಟವರು, ತೆಗೆದುಕೊಂಡವರು ಇದರಲ್ಲಿ ತಪ್ಪಿತಸ್ಥರು. ಉತ್ತಮ ಹಿನ್ನಲೆ ಉಳ್ಳವರು ಸರ್ಕಾರ ನಡೆಸಿದಾಗ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
    ಮುಖಂಡರಾದ ಜಿ.ಎನ್.ಸಿಂಹ, ನಾಗರಾಜ ಕಲಗುಟಕರ, ಎಂ.ಎ.ಅಗಸಿಮುಂದಿನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts