More

    ಲೆಕ್ಕ ಪರಿಶೋಧಕರ ಭವನ ಉದ್ಘಾಟನೆ ನಾಳೆ

    ದಾವಣಗೆರೆ: ದಾವಣಗೆರೆ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಘದಿಂದ ನಗರದ ಹರಿಹರ ರಸ್ತೆಯಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಲೆಕ್ಕ ಪರಿಶೋಧಕರ ನೂತನ ಭವನ ಜೂ. 21ರಂದು ಉದ್ಘಾಟನೆಗೊಳ್ಳಲಿದೆ.
    ಐಡಿಬಿಐ ಬ್ಯಾಂಕಿನ ಅಧ್ಯಕ್ಷ ಟಿ.ಎನ್. ಮನೋಹರನ್ ಅಂದು ಬೆಳಗ್ಗೆ 11 ಗಂಟೆಗೆ ಭವನ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ ಸಿದ್ದೇಶ್ವರ, ಐಸಿಎಐ ಕೇಂದ್ರ ಸಮಿತಿ ಸದಸ್ಯ ಕೋಟಾ ಶ್ರೀನಿವಾಸ್, ಚೇರ‌್ಮನ್ ಎಸ್.ಪನ್ನಾರಾಜ್, ಲೆಕ್ಕ ಪರಿಶೋಧಕರ ಸಂಘದ ರಾಜ್ಯಾಧ್ಯಕ್ಷ ಪ್ರಮೋದ್ ಶ್ರೀಹರಿ ಇತರರು ಭಾಗವಹಿಸುವರು ಎಂದು ದಾವಣಗೆರೆ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಘದ ಜಿಲ್ಲಾ ಗೌರವಾಧ್ಕಕ್ಷ ಅಥಣಿ ಎಸ್. ವೀರಣ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸುಮಾರು 25 ಸದಸ್ಯರಿಂದ 1986ರಲ್ಲಿ ಆರಂಭವಾದ ಸಂಸ್ಥೆಯಲ್ಲಿ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಯ 70 ಸದಸ್ಯರನ್ನು ಹೊಂದಿದೆ. ಸಿಎ ಓದುವ ವಿದ್ಯಾರ್ಥಿಗಳಿಗೆ ತರಬೇತಿ ಮೂಲಕ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಭವನ ನಿರ್ಮಿಸಲಾಗಿದೆ. ಇದಕ್ಕೆ ಶಾಮನೂರು ಶಿವಶಂಕರಪ್ಪ, ಸಿದ್ದೇಶ್ವರ ಅನುದಾನ ನೀಡಿದ್ದಾರೆ.
    8 ಸಾವಿರ ಚದರಡಿಯ ಜಾಗದಲ್ಲಿ ನೆಲಮಹಡಿ, ಮೊದಲ ಹಾಗೂ ಎರಡನೇ ಮಹಡಿವರೆಗೆ ಕಟ್ಟಡ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 250 ಜನ ಸಾಮರ್ಥ್ಯದ ಹವಾನಿಯಂತ್ರಿತ ಸಭಾಂಗಣ, ಡಿಜಿಟಲ್ ಲೈಬ್ರರಿ, ಇ-ಲರ್ನಿಂಗ್ ಸೆಂಟರ್, ವಿಶಾಲ ತರಗತಿ ಕೊಠಡಿ, ಆಡಳಿತ ಕಚೇರಿಯನ್ನು ಹೊಂದಿದೆ ಎಂದರು.
    ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸರಳ ವೆಚ್ಚದಲ್ಲಿ ತರಬೇತಿ ನೀಡುವ ಉದ್ದೇಶವಿದೆ.ನಿರಂತರ ಕಲಿಕೆ ಸಂಬಂ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ವಿಚಾರ ಸಂಕಿರಣ ಆಯೋಜನೆ, ವರ್ತಕರಿಗೆ ತೆರಿಗೆ ಮತ್ತು ಕಾನೂನುಗಳು ಮತ್ತು ಅದರಲ್ಲಿನ ಬದಲಾವಣೆ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶವಿದೆ ಎಂದು ತಿಳಿಸಿದರು.
    ಲೆಕ್ಕ ಪರಿಶೋಧಕರುಎನ್‌ಪಿಆರ್ ಅಡಿಯಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಬೇಕಿದೆ. ಆಗ ಯುಡಿ ನಂಬರ್ ಜನರೇಟ್ ಆಗಲಿದೆ. ಹೀಗಾಗಿ ಯಾರೇ ತಪ್ಪೆಸಗಿದರೂ ಶಿಸ್ತುಕ್ರಮಕ್ಕೆ ಒಳಪಡುವರು ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕಿರಣ್ ಎಲ್ ಪಾಟೀಲ್, ಉಮೇಶ್ ಶೆಟ್ಟಿ, ಬಸವರಾಜ ಒಡೆಯರ್, ಎ.ಕಿರಣಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts