More

    ಲಿಂಗರಾಜ ಕಾಲೇಜಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

    ಮಾಂಜರಿ: ಸಮೀಪದ ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ಬೆಳಗಾವಿ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮೂಡಿಗೇರಿಸಿಕೊಂಡರು.

    ಚರ್ಚಾ ಸ್ಪರ್ಧೆಯಲ್ಲಿ ಬೆಳಗಾವಿ ಲಿಂಗರಾಜ ಕಾಲೇಜ್ (ಪ್ರಥಮ), ಕಾಗವಾಡ ಶಿವಾನಂದ ಕಾಲೇಜ್ (ದ್ವಿತೀಯ), ರಸಪ್ರಶ್ನೆಯಲ್ಲಿ ಲಿಂಗರಾಜ ಕಾಲೇಜ್ (ಪ್ರಥಮ), ಸಮೂಹ ಗೀತೆಯಲ್ಲಿ ಲಿಂಗರಾಜ ಕಾಲೇಜ್ (ಪ್ರಥಮ), ಉಗಾರಖುರ್ದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ದ್ವಿತೀಯ), ಏಕ ವ್ಯಕ್ತಿ ನೃತ್ಯದಲ್ಲಿ ಲಿಂಗರಾಜ ಕಾಲೇಜ್ (ಪ್ರಥಮ), ವ್ಯಾಪಾರ ಯೋಜನೆ ಸ್ಪರ್ಧೆಯಲ್ಲಿ ಚಿಕ್ಕೋಡಿ ಬಿ.ಕೆ.ಕಾಲೇಜ್ (ಪ್ರಥಮ), ಲಿಂಗರಾಜ ಕಾಲೇಜ್ (ದ್ವಿತೀಯ), ಮಾರುಕಟ್ಟೆ ಸ್ಪರ್ಧೆಯಲ್ಲಿ ಲಿಂಗರಾಜ ಕಾಲೇಜ್ (ಪ್ರಥಮ), ಚಿಕ್ಕೋಡಿ ಜಿ.ಎ್.ಜಿ.ಸಿ ಕಾಲೇಜ್ (ದ್ವಿತೀಯ), ಪ್ರಧಾನ ವ್ಯವಸ್ಥಾಪಕ ಸ್ಪರ್ಧೆಯಲ್ಲಿ ಉಗಾರಖುರ್ದ ಪಿ.ಇ.ಎಸ್ ಕಾಲೇಜ್ (ಪ್ರಥಮ), ಸಮೂಹ ನೃತ್ಯ ಸ್ಪರ್ಧೆಯಲ್ಲಿ ಲಿಂಗರಾಜ ಕಾಲೇಜ್ (ಪ್ರಥಮ), ಉಗಾರಖುರ್ದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ದ್ವಿತೀಯ) ಸ್ಥಾನ ಪಡೆದಿದ್ದಾರೆ.

    ಕಾಲೇಜಿನ ಪ್ರಾಚಾರ್ಯ ಪ್ರೊ. ಎ.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿವತ್ತ ಪ್ರಾಚಾರ್ಯ ಡಾ. ಆರ್.ಬಿ. ಪಾಟೀಲ, ಕೆ.ಎಲ್.ಇ ಸಂಸ್ಥೆಯ ಆಜೀವ ಸದಸ್ಯ ಬಿ.ಎಸ್.ಅಂಬಿ, ಸಂಯೋಜಕ ಎಂ.ಎಸ್.ಕಾನಡೆ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ತುಕಾರಾಮ ಪಾಟೀಲ, ಸುರೇಶ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಅಣ್ಣಪ್ಪ ಹರಕೆ ಹಾಗೂ ಅಂಕಲಿ ಅಂಗಸಂಸ್ಥೆಗಳ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts