More

    ಲಾಜ್​ಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬೇಡಿ

    ವಿಜಯವಾಣಿ ಸುದ್ದಿಜಾಲ ಹಳಿಯಾಳ: ಪಟ್ಟಣದ ಲಾಜ್​ಗಳಲ್ಲಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸಿದ್ದಲ್ಲಿ ಅಥವಾ ಇತರ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದ ಲಾಜ್ ಮತ್ತು ಕಟ್ಟಡದ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಳಿಯಾಳ ಸಿಪಿಐ ಬಿ.ಎಸ್. ಲೋಕಾಪುರ ಎಚ್ಚರಿಸಿದ್ದಾರೆ.

    ಬುಧವಾರ ಸಿಪಿಐ ಕಚೇರಿಯಲ್ಲಿ ಲಾಜ್, ಬಾರ್ ರೆಸ್ಟೋರೆಂಟ್, ರೆಕ್ರೆಷನ್ ಕ್ಲಬ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಬದ್ಧವಾಗಿ ದುಡಿಯಲು ಆಗದಿದ್ದರೆ ಲಾಜ್​ಗಳನ್ನು ಬಂದ್ ಮಾಡಿ ಅದನ್ನು ಬಿಟ್ಟು ಹಳಿಯಾಳ ಪಟ್ಟಣದ ಹೆಸರಿಗೆ ಕಳಂಕ ತರುವ ಕಾರ್ಯ ಮಾಡಬೇಡಿ ಎಂದರು.

    ಲಾಜ್​ಗಳಲ್ಲಿ ತಂಗಲು ಬರುವ ಗ್ರಾಹಕರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಅವುಗಳನ್ನು ತಮ್ಮ ದಾಖಲೆ ಪುಸ್ತಕಗಳಲ್ಲಿ ನಮೂದಿಸಿ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಸ್ಥಳೀಯ ಜನರಿಗೆ ಲಾಜ್​ನಲ್ಲಿ ಇರಲು ಯಾವತ್ತೂ ಅವಕಾಶ ನೀಡಬಾರದು. ಲಾಜ್​ನಲ್ಲಿ ಸಿ.ಸಿ ಕ್ಯಾಮರಾ ಹಾಕಬೇಕು. ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಲಾಜ್​ಗಳಿಗೆ ಬರುವ ಗ್ರಾಹಕರ ದಾಖಲೆಯನ್ನು ಪೊಲೀಸ್ ಠಾಣೆಗೆ ತಂದು ನಮೂದಿಸಬೇಕು. ಅದರ ಜೊತೆಯಲ್ಲಿ ಆಯಾ ದಿನದ ಸಿ.ಸಿ. ಟಿವಿ ಫೂಟೇಜ್ ಅನ್ನು ಪೊಲೀಸ್ ಕಂಟ್ರೋಲ್ ರೂಮಿಗೆ ಬಂದು ಡೌನ್ಲೋಡ್ ಮಾಡಬೇಕು. ಅಪರಿಚಿತರು ಅಥವಾ ಹೊರಗಿನ ವ್ಯಕ್ತಿಗಳು ಬಂದರೇ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದರು.

    ತೆರವುಗೊಳಿಸಲು ಪ್ರಸ್ತಾವನೆ: ಪಟ್ಟಣದ ವನಶ್ರೀ ಲಾಜ್ ಕಟ್ಟಡದ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಸಿಪಿಐ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಲಾಜ್​ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಅವುಗಳನ್ನು ಕಂಡು ಮೌನವಾಗಿರುವುದು ದೊಡ್ಡ ಅಪರಾಧ ಎಂದರು.

    ಪಿಎಸ್​ಐ ಯಲ್ಲಾಲಿಂಗ ಕೊಣ್ಣೂರ ಮಾತನಾಡಿ, ವನಶ್ರೀ ಲಾಜ್​ನಲ್ಲಿ ಮಾಡಿರುವ ಅಕ್ರಮ ಚಟುವಟಿಕೆ ಮತ್ತು ನಿಯಮಬಾಹಿರವಾಗಿ ಮಹಿಳೆಯರನ್ನು ಕೂಡಿ ಹಾಕಲು ನಿರ್ವಿುಸಿರುವ ಅಕ್ರಮ ರಹಸ್ಯ ಕೊಠಡಿ ಇತ್ಯಾದಿ ಹಿನ್ನೆಲೆಯಲ್ಲಿ ಈ ಲಾಜ್ ಅನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಕಳಿಸಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts