More

    ರಾಷ್ಟ್ರೀಯ ಹೆದ್ದಾರಿ ದುರಸ್ಥಿ ಯಾವಾಗ?

    ಯಾದಗಿರಿ: ನಗರದ ಹೊರ ವಲಯದಲ್ಲಿನ ವಿಜಯಪುರ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟ ಕಾರಣ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

    ಹೆದ್ದಾರಿಯ ಮೇಲೆ ಕಂದಕ ಸೃಷ್ಠಿಯಾಗಿದ್ದು ಸಂಚಾರಕ್ಕಾಗಿ ಸರ್ಕಸ್ ಮಾಡುವಂತಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಭಾರಿಗಾತ್ರದ ವಾಹನಗಳು ಸಂಚರಿಸುತ್ತವೆ. ಕಳೆದೊಂದು ದಶಕದಿಂದ ಈ ರಸ್ತೆ ಸ್ಥಿತಿ ಹೀಗೆ ಇದ್ದು ಬದಲಾಗುವ ಯಾವುದೇ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ರಸ್ತೆ ದುರಸ್ಥಿ ಮಾಡಿಸಿ ಎಂದರೆ, ಇಷ್ಟರಲ್ಲೇ ರಾಷ್ಟ್ರೀಯ ಹೆದ್ದಾರಿ ನಿಮರ್ಾಣಗೊಳ್ಳುತ್ತಿದೆ ಎಂದು ಅಕಾರಿಗಳು ಸಬೂಬು ನೀಡುತ್ತಾರೆ.

    ಅಲ್ಲದೆ ಈ ರಸ್ತೆ ಶಹಾಪುರ, ಸುರಪುರ ಮತ್ತು ನೆರೆ ರಾಜ್ಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹಾಳಾಗಿರುವ ರಸ್ತೆಯ ಮೇಲೆ ಕೊಂಚ ಮೈಮರೆತು ಸಂಚರಿಸಿದರೂ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ. ಇನ್ನೂ ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ರಸ್ತೆ ಮೇಲಿನ ಡಾಂಬಾರು ಕಿತ್ತಿದ್ದು, ಅಲ್ಲಲ್ಲಿ ತಗ್ಗುಗಳು ಬಿದ್ದಿವೆ.
    ಯಾದಗಿರಿಯಿಂದ ನಾಯ್ಕಲ್ ಗ್ರಾಮದವರೆಗೆ ಹೆದ್ದಾರಿ ಸಾಕಷ್ಟು ಹಾಳಾಗಿದ್ದು ವಾಹನ ಸವಾರರು ಹೈರಾಣಾಗುವಂತಾಗಿದೆ. ಇದಲ್ಲದೆ ನಗರದ ರೈಲ್ವೆ ಮೇಲ್ಸೇತುವೆ ರಸ್ತೆಯ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಮಳೆ ಬಂದರೆ ಸಾಕು ಈ ರಸ್ತೆ ಅಕ್ಕಪಕ್ಕ ಕುಸಿತ ಕಾಣುತ್ತಿದೆ. ಇದರಿಂದ ಲೊಕೋಪಯೋಗಿ ಇಲಾಖೆ ಅಕಾರಿಗಳು ತಿಂಗಳುಗಟ್ಟಲೇ ರಸ್ತೆ ಬಂದ್ ಮಾಡುತ್ತಿದ್ದಾರೆ. ಜನತೆ ಅನಿವಾರ್ಯವಾಗಿ ಭೀಮಾ ಬ್ಯಾರೇಜ್ ರಸ್ತೆಯಿಂದ ಸಂಚರಿಸುವ ಸ್ಥಿತಿ ನಿಮರ್ಾಣವಾಗಿದೆ.

    ವಾಹನಗಳ ಸುಗಮ ಸಂಚಾರಕ್ಕೆ ಶಾಶ್ವತ ಪರಿಹಾರ ಯಾವಾಗ ಎಂದು ಸವಾರರ ಪ್ರಶ್ನಿಸುತ್ತಿದ್ದು, ಇದಕ್ಕೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹಾಗೂ ಸಂಬಂಸಿದ ಇಲಾಖೆ ಅಕಾರಿಗಳು ಉತ್ತರಿಸಬೇಕಿದೆ. ಶೀಘ್ರದಲ್ಲಿ ರಸ್ತೆ ರಿಪೇರಿ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂಬುದು ಜನರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts