More

    ರಾಷ್ಟ್ರಪ್ರೇಮದ ಪ್ರತೀಕ ಹರ್ ಘರ್ ತಿರಂಗಾ

    ಎನ್.ಆರ್.ಪುರ: ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಶನಿವಾರ ತಾಲೂಕು ಬಿಜೆಪಿ ಬಿ.ಎಚ್.ಕೈಮರದಿಂದ ಪ್ರವಾಸಿಮಂದಿರದವರೆಗೆ ಬೈಕ್ ಜಾಥಾ ನಡೆಸಿತು. ವಾಟರ್ ಟ್ಯಾಂಕ್ ಸರ್ಕಲ್ ಬಳಿ ಮಾನವ ಸರಪಳಿ ರಚಿಸಿದ ಕಾರ್ಯಕರ್ತರು ದೇಶಭಕ್ತಿಯ ಘೊಷಣೆ ಮೊಳಗಿಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ರಾಷ್ಟ್ರಧ್ವಜಾರೋಹಣವು ಶಾಲೆ, ಸರ್ಕಾರಿ ಕಚೇರಿಗಳಿಗೆ ಸೀಮಿತವಾಗಿಬಿಟ್ಟಿದೆ. ಸಾರ್ವಜನಿಕರಲ್ಲೂ ಇದರ ಮಹತ್ವ ತಿಳಿಸುವ ಉದ್ದೇಶದಿಂದ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ನಡೆಸಿದೆ ಎಂದರು.

    ಖಾದಿ ಧ್ವಜ ನೀಡುವ ಬದಲು ಸಿಲ್ಕ್ ಬಟ್ಟೆಯ ಧ್ವಜ ನೀಡಿದ್ದಾರೆ. ಹಣ ನೀಡಬೇಕೆಂಬ ಅಸಮಾಧಾನ ವ್ಯಕ್ತವಾಗಿದೆ. ಕಡಿಮೆ ಅವಧಿಯಲ್ಲಿ ದೇಶದ 50 ಕೋಟಿ ಮನೆಗಳಿಗೆ ಖಾದಿ ಧ್ವಜ ಪೂರೈಕೆ ಕಷ್ಟಸಾಧ್ಯ. ಆದ್ದರಿಂದ ಸಿಲ್ಕ್ ಬಟ್ಟೆಯ ಧ್ವಜ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಪಿ.ಜೆ.ಆಂಟೋನಿ ಮಾತನಾಡಿ, ರಾಷ್ಟ್ರಧ್ವಜ ಸ್ವಾತಂತ್ರ್ಯ ಸಂಕೇತ. ಅಮೃತ ಮಹೋತ್ಸವ ಅಂಗವಾಗಿ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರಪ್ರೇಮ ಮೆರೆಯುವ ಅವಕಾಶವನ್ನು ಸರ್ಕಾರ ನಮಗೆ ದೊರಕಿಸಿಕೊಟ್ಟಿದೆ ಎಂದರು.

    ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್​ಕುಮಾರ್ ಮಾತನಾಡಿ, ಮನೆ ಮನೆಯಲ್ಲಿ ಧ್ವಜಾರೋಹಣ ಮಾಡುವುದಕ್ಕೆ ಕೆಲವೆಡೆ ಅಪಸ್ವರಗಳು ಕೇಳಿಬರುತ್ತಿವೆ. ಇವುಗಳಿಗೆ ಕಿವಿಗೊಡುವ ಅವಶ್ಯಕತೆಯಿಲ್ಲ. ಧ್ವಜ ಸಂಹಿತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts