More

    ರಂಭಾಪುರಿ ಶ್ರೀಗಳ ಇಷ್ಟಲಿಂಗ, ಶಮಿಪೂಜೆ

    ಬೇಲೂರು: ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರವನ್ನರಾತ್ರಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ವಿಜಯದಶಮಿ ದಿನವಾದ ಬುಧವಾರ ಪಟ್ಟಣ ಸಮೀಪದ ವಿಷ್ಣುಸಮುದ್ರ ಕಲ್ಯಾಣಿಯ ಬಳಿ 1008 ಅಗ್ರೋದಕ ಕುಂಭ ಕಳಸಗಳಿಗೆ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

    ಪಟ್ಟಣದಲ್ಲಿ ಹತ್ತು ದಿನಗಳಿಂದ ನಡೆಯುತ್ತಿರುವ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರವನ್ನರಾತ್ರಿ ದಸರಾ ಧರ್ಮ ಸಮ್ಮೇಳನದ ಅಂತಿಮ ದಿನ ಇಷ್ಟಲಿಂಗ ಮಹಾಪೂಜೆಗಾಗಿ ಬೆಳಗ್ಗೆ ವಿಷ್ಣುಸಮುದ್ರ ಕಲ್ಯಾಣಿ ಸಮೀಪದಿಂದ 1008 ಕುಂಭ ಕಳಸಗಳನ್ನು ಹೊತ್ತ ಸಮಂಗಲಿಯರೊಂದಿಗೆ ಸ್ವತಃ ಬಾಳೆಹೊನ್ನೂರು ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಗ್ರೋದಕ ಹೊತ್ತು, ಶರನ್ನವರಾತ್ರಿ ದಸರಾ ದರ್ಬಾರ್ ಸಮಿತಿ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಕೆಂಪೇಗೌಡ ರಸ್ತೆ, ದೇಗುಲ ರಸ್ತೆ, ಬಸವೇಶ್ವರ ವೃತ್ತದ ಮಾರ್ಗವಾಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ಇಷ್ಟಲಿಂಗ ಪೂಜಾ ಸ್ಥಳಕ್ಕೆ ಆಗಮಿಸಿದರು.

    ವಿಷ್ಣುಸಮುದ್ರ ಕಲ್ಯಾಣಿಯಿಂದ ಶ್ರೀ ರಂಭಾಪುರಿ ಜಗದ್ಗುರುಗಳು ಆಗ್ರೋದಕ ಪೂರ್ಣಕುಂಭವನ್ನು ಹೊತ್ತು ಸಾಗುತ್ತಿದ್ದಾಗ ಶ್ರೀಗಳ ಹಿಂಭಾಗದಲ್ಲಿ 1008ಕ್ಕೂ ಅಧಿಕ ಸ್ತ್ರೀಯರು ಕುಂಭಕಳಸಗಳನ್ನು ಹೊತ್ತು ವೇದ ಘೋಷದೊಂದಿಗೆ ಹೆಜ್ಜೆ ಹಾಕಿದರು. ಇದೇ ಸಂದರ್ಭ ಗ್ರಾನೈಟ್ ರಾಜಶೇಖರ್ ಕುಟುಂಬದಿಂದ ಮಾಡಿಸಿದ್ದ ಶ್ರೀ ರೇಣುಕಾಚಾರ್ಯರು ಮತ್ತು ವೀರಭದ್ರಸ್ವಾಮಿಯ ಬೆಳ್ಳಿಯ ವಿಗ್ರಹಗಳನ್ನು ಸಹ ಅಗ್ರೋದಕ ಪೂರ್ಣ ಕುಂಭಗಳೊಂದಿಗೆ ಹೊತ್ತು ಸಾಗಿದರು.

    ಪ್ರತಿನಿತ್ಯ ಶ್ರೀರಂಭಾಪುರಿ ಪೀಠದ ಜಗದ್ಗುರುಗಳು ನಡೆಸಿಕೊಂಡು ಬರುತ್ತಿರುವ ಇಷ್ಟಲಿಂಗ ಮಹಾಪೂಜೆಗೆ ಶಾಖಾ ಮಠಗಳ ಶಿವಾಚಾರ್ಯರು ಹಾಗೂ ವಿವಿಧ ಗ್ರಾಮಗಳ ಮಹಿಳೆಯರು, ಪ್ರತಿದಿನ ಅಗ್ರೋದಕ ತರುವ ಸಂಪ್ರದಾಯದಂತೆ, ದಸರಾ ಧರ್ಮ ಸಮ್ಮೇಳನದ ಅಂತಿಮ ದಿನವಾದ ವಿಜಯದಶಮಿಯ ಶಮಿಪೂಜೆ ದಿನ ಜಗದ್ಗುರುಗಳು ಸ್ವತಃ ಅಗ್ರೋದಕ ಪೂರ್ಣಕುಂಭವನ್ನು ಹೊತ್ತು 1008 ಕುಂಭ ಕಲಸದೊಂದಿಗೆ ಸಾಗುವುದು ವೈಶಿಷ್ಟೃಪೂರ್ಣವಾಗಿತ್ತು. 1008 ಕುಂಭ ಕಳಸಗಳಿಗೆ ಶ್ರೀ ಪಂಚಪೀಠಗಳ ಲಾಂಛನಗಳಾದ ಹಸಿರು, ಹಳದಿ, ನೀಲಿ, ಬಿಳಿ ಮತ್ತು ಕೆಂಪು ಬಣ್ಣದ ಹೂವುಗಳನ್ನು ಅಲಂಕಾರ ಮಾಡಲಾಗಿತ್ತು. ಕುಂಭ ಕಳಸಗಳನ್ನು ಹೊತ್ತು ಸಾಗುವ ಸುಮಂಗಲಿಯರು ಸಹ ಪಂಚ ಪೀಠದ ಲಾಂಛನಗಳ ಮಾದರಿಯಲ್ಲೇ ಸೀರೆಯನ್ನುಟ್ಟು ಶ್ರೀಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

    ಎಡೆಯೂರು, ಕಾರ್ಜುವಳ್ಳಿ, ದೊಡ್ಡಗುಣಿ, ಮಳಲಿ, ತೆಂಕಲಗೊಡು ಶ್ರೀಗಳು ಹಾಗೂ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಲಿಂಗೇಶ್, ಕಾರ್ಯಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ಖಜಾಂಚಿ ನಟರಾಜ್, ಮಾಧ್ಯಮ ಸಮಿತಿ ಅಧ್ಯಕ್ಷ ಎಚ್.ಎಂ.ದಯಾನಂದ, ಉಪಾಧ್ಯಕ್ಷ ಗ್ರಾನೈಟ್ ರಾಜಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ದಿಲೀಪ್, ಆಮಂತ್ರಣ ಸಮಿತಿ ಅಧ್ಯಕ್ಷ ಮಲ್ಲೇಶ್, ಯುವ ಘಟಕದ ಅಧ್ಯಕ್ಷ ಚೇತನ್, ಹಾಸನ ವೀರಶೈವ ಸಂಘದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ರಾಮನಾಥಪುರ ಕುಮಾರಸ್ವಾಮಿ, ದಾಸೋಹ ಸಮಿತಿ ಅಧ್ಯಕ್ಷ ಚೇತನ್, ಸಮಿತಿಯ ವಿರೂಪಾಕ್ಷ, ಬಿ.ಕೆ.ಚಂದ್ರಕಲಾ, ಅನ್ನಪೂರ್ಣ, ಶೋಭಾ ಗಣೇಶ್, ಸುಜಾತಾ, ವೇದಿಕೆ ಸಮಿತಿ ಅಧ್ಯಕ್ಷ ನಂದೀಶ್, ಕಲ್ಲೇಶ್, ಮ.ಶಿವಮೂರ್ತಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts