More

    ಯುವ ಕಾಂಗ್ರೆಸ್​ನ ಎತ್ತಿನಗಾಡಿ ಜಾಥಾ: ಬೆಲೆ ಏರಿಕೆಗೆ ಖಂಡನೆ

    ಕುಣಿಗಲ್​: ಎನ್​ಡಿಎ ಸರ್ಕಾರದ ಜನವಿರೋಧಿ ನೀತಿಯಿಂದ ದೇಶ ದಿವಾಳಿ ಹಂತ ತಲುಪಿದೆ. ಪೆಟ್ರೋಲ್​, ಡೀಸೆಲ್​, ಅಡುಗೆ ಅನಿಲ ಸಿಲಿಂಡರ್​ ಸೇರಿ ಅಗತ್ಯವಸ್ತುಗಳ ಬೆಲೆಯನ್ನು ಎದ್ವಾತದ್ವ ಏರಿಕೆ ಮಾಡಿ ಸಾಮಾನ್ಯ ಜನರನ್ನು ಬೀದಿಗೆ ತಳ್ಳಿದೆ ಎಂದು ಶಾಸಕ ಡಾ. ಎಚ್​.ಡಿ. ರಂಗನಾಥ್​ ಆರೋಪಿಸಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕುಣಿಗಲ್​ ತಾಲೂಕು ಯುವ ಕಾಂಗ್ರೆಸ್​ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ಬಳಿ ಏರ್ಪಡಿಸಿದ್ದ ಎತ್ತಿನಗಾಡಿ ಜಾಥಾದಲ್ಲಿ ಮಾತನಾಡಿದರು.

    ಯುವ ಕಾಂಗ್ರೆಸ್​ ಅಧ್ಯಕ್ಷ ಕೆ.ಎನ್​. ಲೋಹಿತ್​ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬೆಲೆಗಳು ಗಗನಕ್ಕೇರಿವೆ. ಇದನ್ನು ಮುಚ್ಚಿ ಹಾಕಲು ಕೋಮುಗಲಭೆ ಸೃಷ್ಟಿಸಿ, ಸಹೋದರಂತೆ ಬದುಕುತ್ತಿದ್ದ ಹಿಂದು, ಮುಸ್ಲಿಂಮರ ಮಧ್ಯೆ ಧರ್ಮದ ವಿಷ ಬೀಜ ಬಿತ್ತಿ ರಾಜ್ಯದಲ್ಲಿ ಅಶಾಂತಿ ಮೂಡಿಸಲಾಗಿದೆ ಎಂದರು.

    ಯುವ ಕಾಂಗ್ರೆಸ್​ ಟೌನ್​ ಅಧ್ಯಕ್ಷ ಕೆ.ಆರ್​. ಮಾರುತಿ ಮಾತನಾಡಿ, ಡಾ. ಮನಮೋಹನ್​ಸಿಂಗ್​ ಅವರ ಆಡಳಿತ ಅವಧಿಯಲ್ಲಿ 350ರಿಂದ 400 ರೂ. ಇದ್ದ ಅಡುಗೆ ಅನಿಲ ಸಿಲಿಂಡರ್​ ಬೆಲೆ ಇತ್ತು. ಜತೆಗೆ ಸಹಾಯಧನ ನೀಡಲಾಗುತ್ತಿತ್ತು. ಪೆಟ್ರೋಲ್​ ಲೀಟರ್​ಗೆ 60 ರೂ., ಡೀಸೆಲ್​ಗೆ 42 ರೂ., ದರ ಇತ್ತು. ಈ ದರಗಳೇ ಹೆಚ್ಚು ಎಂದು ಆಗ ಬಿಜೆಪಿ ಮುಖಂಡರು ಬೊಬ್ಬೆ ಹೊಡೆದು ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಅಲ್ಲದೆ, ತಾವು ಅಧಿಕಾರಕ್ಕೆ ಬಂದರೆ 50 ರೂ.ಗೆ ಪೆಟ್ರೋಲ್​, 30 ರೂ.ಗೆ ಡೀಸೆಲ್​ ಕೊಡುವುದಾಗಿ ಹೇಳಿದ್ದರು. ಆದರೆ, ಈಗ ಬೆಲೆಯನ್ನು ಹೆಚ್ಚಿಸಿ, ಜನರಿಗೆ ಮೋಸ ಮಾಡಿದ್ದಾರೆ. ಎಂಟು ವರ್ಷದ ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 112 ರೂ., ಡೀಸಲ್​ 108 ರೂ., ಆಗಿದೆ, ಅಡುಗೆ ಅನಿಲ ಸಿಲಿಂಡರ್​ ಬೆಲೆ ಸಾವಿರ ರೂಪಾಯಿ ತಲುಪಿದೆ. ಇದೇನಾ ಅಚ್ಚೇದಿನ್​ ಎಂದು ಪ್ರಶ್ನಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಿಂದ ಎನ್​. ಹುಚ್ಚಮಾಸ್ತಿಗೌಡ ಸರ್ಕಲ್​ನವರೆಗೆ ಎತ್ತಿನ ಗಾಡಿ ಜಾಥಾ ಮಾಡಲಾಯಿತು. ಅಡುಗೆ ಅನಿಲದ ಖಾಲಿ ಸಿಲಿಂಡರ್​, ಬೈಕ್​ಗಳ ಅಣಕು ಶವಯಾತ್ರೆ ಮಾಡಲಾಯಿತು.

    ಮುಖಂಡರಾದ ನಿಶಾಂತ್​, ಮಹೇಂದ್ರ, ಅರುಣ್​, ಹನುಮಂತು, ವಿಜಿ, ಹರೀಶ್​, ಜೀವನ್​, ಸಂತೋಷ್​ ಇತರರಿದ್ದರು.

    ಕಾಂಗ್ರೆಸ್​ ಆಡಳಿತದಲ್ಲಿ ಬಡತನ ನಿಮೂರ್ಲನೆ, ನೀರಾವರಿ, ವಿದ್ಯುತ್​, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಬಾಹ್ಯಕಾಶದಲ್ಲಿ ಸಾಧನೆ, ಆಹಾರ ಭದ್ರತೆಯಲ್ಲಿ ದೇಶ ಗಣನೀಯ ಸಾಧನೆ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಶೂನ್ಯ ಸೇವೆ ನೀಡಿ ಜನರ ಜೀವನದಲ್ಲಿ ಆಟವಾಡುತ್ತಿದೆ.
    > ಡಾ. ಎಚ್​.ಡಿ. ರಂಗನಾಥ್​ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts