More

    ಯುವಕರಿಗಾಗಿ ಮುಂದುವರಿದ ಶೋಧ

    ರಾಣೆಬೆನ್ನೂರ: ತಾಲೂಕಿನ ಕೋಣನತಂಬಗಿ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿರುವ ಯುವಕರಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮಂಗಳವಾರ ತೀವ್ರ ಶೋಧ ನಡೆಸಿದರು.

    ತಾಲೂಕಿನ ಅರೇಮಲ್ಲಾಪುರ ಗ್ರಾಮದ ಜಗದೀಶ ಹಾಗೂ ಬೆಟ್ಟಪ್ಪ ಎಂಬ ಯುವಕರು ಸೋಮವಾರ ನದಿಯಲ್ಲಿ ಕೊಚ್ಚಿ ಹೋಗಿದ್ದರು. ನೀರಿನ ಸೆಳವಿಗೆ ಸಿಲುಕಿ ಎರಡು ಎತ್ತುಗಳೂ ಮೃತಪಟ್ಟಿದ್ದವು.

    ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯತ್ತಿದೆ. ಮೃತ ಎತ್ತು ದೊರೆತ ಸ್ಥಳವಾದ ಮೇಡ್ಲೇರಿ, ಉದಗಟ್ಟಿ ಸೇರಿ ನದಿಯುದ್ದಕ್ಕೂ ಮುಳುಗು ತಜ್ಞರ ಸಹಾಯದಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದರು. ಆದರೆ, ಯುವಕರ ಬಗ್ಗೆ ಸುಳಿವು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಎನ್​ಡಿಆರ್​ಎಫ್ ತಂಡ ಕರೆಸಲು ಒತ್ತಾಯ: ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ತೆಪ್ಪದ ಮೂಲಕ ಶೋಧ ಕಾರ್ಯ ನಡೆಸುವುದು ಅಪಾಯಕಾರಿ. ಆದ್ದರಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೂಡಲೆ ಸೂಕ್ತ ಕ್ರಮ ಕೈಗೊಂಡು ಎನ್​ಡಿಆರ್​ಎಫ್ ತಂಡವನ್ನು ಕರೆತಂದು ಶೋಧ ಕಾರ್ಯ ನಡೆಸಬೇಕು ಎಂದು ಯುವಕರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಚೆಕ್ ವಿತರಣೆ: ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಎರಡು ಎತ್ತುಗಳಿಗೆ ಪರಿಹಾರವಾಗಿ ತಹಸೀಲ್ದಾರ್ ಬಸನಗೌಡ ಕೋಟೂರ ಅವರು ಎತ್ತುಗಳ ಮಾಲಕಿ ಬಸಮ್ಮ ಯಂಕಪ್ಪ ಐರಣಿ ಅವರಿಗೆ 50 ಸಾವಿರ ರೂ. ಚೆಕ್ ಮಂಗಳವಾರ ವಿತರಿಸಿದರು. ಉಪ ತಹಸೀಲ್ದಾರ್ ಕೆ.ಜಿ. ಗೊರವರ ಉಪಸ್ಥಿತರಿದ್ದರು.

    ಪೊಲೀಸರಿಂದ ಜಾಗೃತಿ: ತುಂಗಭದ್ರಾ ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವುದರಿಂದ ನದಿಪಾತ್ರಕ್ಕೆ ತೆರಳದಂತೆ ಗ್ರಾಮೀಣ ಠಾಣೆ ಪಿಎಸ್​ಐ ವಸಂತ ಹಾಗೂ ಸಿಬ್ಬಂದಿ ತಾಲೂಕಿನ ಹರನಗಿರಿ, ಉದಗಟ್ಟಿ, ಮೇಡ್ಲೇರಿ, ಕೋಣನತಂಬಗಿ ಚಂದಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ನಾಮಫಲಕ ಅಳವಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts