More

    ಮೋದಿ ಮತ್ತೊಮ್ಮೆ ಪ್ರಧಾನಿ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ


    ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವನ್ನು ಬಿಜೆಪಿ ಗೆಲ್ಲಲೇ ಬೇಕಿದೆ, ಅದಕ್ಕಾಗಿ ಪಕ್ಷದ ಕಾರ‌್ಯಕರ್ತರು,ಮುಖಂಡರು ಈಗಿನಿಂದಲೇ ಸಜ್ಜಾಗಬೇಕಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
    ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಹಿರಿಯೂರು,ಶಿರಾ ತಾಲೂಕುಗಳ ಜೆಡಿಎಸ್,ಕಾಂಗ್ರೆಸ್ ಹಲವು ಮುಖಂಡರನ್ನು ಪಕ್ಷಕ್ಕೆ ಬರ ಮಾಡಿ ಕೊಂಡು ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ದೇಶದ ಪ್ರಧಾನಿಯನ್ನಾಗಿ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ.
    ಇದಕ್ಕಾಗಿ ಚಿತ್ರದುರ್ಗ ಸೇರಿ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕಿದ್ದು, ತಕ್ಷಣದಿಂದಲೇ ಗೆಲುವು ಪಡೆಯಲು ನಮ್ಮ ಕಾರ‌್ಯಕರ್ತರು, ಮುಖಂಡರು ಸನ್ನದ್ಧರಾಗಬೇಕಿದೆ. ಅನ್ಯ ಪಕ್ಷಗಳ ಹಲವು ಮುಖಂಡರು ಬಿಜೆಪಿ ಸೇರುತ್ತಿರುವುದು ಸಂತೋಷದ ವಿಷಯವಾಗಿದ್ದು,ಅವರು ಕೂಡ ಬಿಜೆಪಿ ಗೆಲುವಿಗೆ ಶ್ರಮಿಸಬೇಕಿದೆ.
    ಈ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಸಿಗಲಿ ಅವರನ್ನು ಗೆಲ್ಲಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪಡೆದ ಮತಕ್ಕಿಂತ ಈ ಚುನಾವಣೆಯಲ್ಲಿ ಶೇ.10 ಹೆಚ್ಚಿನ ಪ್ರಮಾಣದ ಮತಗಳೊಂದಿಗೆ ಜಯವನ್ನು ಪಡೆಯ ಬೇಕಿದೆ. ಮೋ ದಿ ಅವರ ಹಲವು ಸಾಧನೆಗಳನ್ನು ಕಾರ‌್ಯಕರ್ತರು ಪ್ರತಿ ಮನೆಗೆ ತಿಳಿಸ ಬೇಕಿದೆ.
    ಕಾಂಗ್ರೆಸ್ ಸರ್ಕಾರ,ಪ್ರತಿ ವಿಚಾರದಲ್ಲೂ ಕೇಂದ್ರದೆಡೆ ಕೈ ತೋರಿಸುತ್ತಿದೆ. ಅಕ್ಕಿ,ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ಕೇಂದ್ರವನ್ನು ವಿನಾಕಾರಣ ದೂಷಿಸುತ್ತಿದೆ ಹೊರತು ಜನರಿಗೆ ನೆರವಾಗುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ,ನಾಟಕ ಮಾಡುತ್ತಿದೆ ಎಂದರು.
    ಜೆಡಿಎಸ್ ತೋರಿದು ಬಿಜೆಪಿ ಸೇರಿದ ಜಿ.ಪಂ.ಮಾಜಿ ಸದಸ್ಯ ದ್ಯಾಮಣ್ಣ ಮಾತನಾಡಿ,ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ, ಹಲವು ಕಾರಣಗಳಿ ಂದ ಜೆಡಿಎಸ್ ಸೇರಿದ್ದೆ. ಪ್ರಧಾನಿ ಕಾರ್ಯ ವೈಖರಿ ಮೆಚ್ಚಿ ಮರಳಿ ಬಿಜೆಪಿಗೆ ಬಂದಿದ್ದೇನೆ. ನನ್ನ ಕ್ಷೇತ್ರದ 284 ಬೂತ್‌ಗಳಲ್ಲೂ ಲೋಕಸಭಾ ಚು ನಾವಣೆ ಬಿಜೆಪಿಗೆ ಲೀಡ್ ಕೊಡಿಸುವ ಮೂಲಕ ಹೆಚ್ಚಿನ ಮತಗಳ ಅಂತರದೊಂದಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುವುದಾಗಿ ಹೇಳಿದ ರು.
    ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ ಅಧ್ಯಕ್ಷತೆ ವಹಿಸಿದ್ದರು. ಕುಡಾ ಮಾಜಿ ಅಧ್ಯಕ್ಷ ಸುರೇಶ್‌ಸಿದ್ದಾಪುರ, ಕಲ್ಲೇಶಯ್ಯ,ಸಂಪತ್‌ಕುಮಾರ್,ಶಿವಣ್ಣ, ಮೋಹನ್,ಶಿವಪ್ರಕಾಶ್‌ದಗ್ಗೆ ಮತ್ತಿತರರು ಇದ್ದರು. ರವಿವರ್ಮ,ಸೋಮಣ್ಣ,ಶೇಖರಪ್ಪ,ರಂಗನಾಥ್ ಹಾಗೂ ರುದ್ರೇಶ್ ಬಿಜೆಪಿ ಸೇರಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts