More

    ಮೋದಿ ಮತ್ತೆ ಪ್ರಧಾನಿ ಆಗುವುದು ಗ್ಯಾರಂಟಿ,ತಿಪ್ಪಾರೆಡ್ಡಿ

    ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗಿದ್ದರೆ, ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ಹುಡುಕಾ ಟದಲ್ಲಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
    ನಗರದ ರೆಡ್ಡಿ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ,ಗ್ರಾಮಾಂತರ ಮಂಡಲ ಕಾರ‌್ಯಕರ್ತರ ಗ್ರಾಮಚಲೋ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ದೇಶದ 400ಕ್ಕೂ ಹೆಚ್ಚು ಕ್ಷೇತ್ರಗಳ ಗೆಲುವಿ ನೊಂದಿಗೆ ನರೇಂದ್ರಮೋದಿ ಅವರು ಮತ್ತೆ ಪ್ರಧಾನಿ ಆಗುವುದು ಗ್ಯಾರಂಟಿ.
    ಜೆಡಿಎಸ್ ಜತೆ ಹೊಂದಾಣಿಕೆಯಿಂದಾಗಿ ಕರ್ನಾಟಕದ 28 ಸ್ಥಾನಗಳಲ್ಲೂ ಬಿಜೆಪಿಯ ಗೆಲುವು ಖಚಿತ. ಮಾಜಿ ಪ್ರಧಾನಿ ದೇವೇ ಗೌಡರ ಬೆಂಬಲದಿಂದಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಶಕ್ತಿ ಬಂದಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಈಗ ಏನಾಗುತ್ತಿದೆ ನಾವು ಮಾತನಾಡುತ್ತಿಲ್ಲ,ಜನರೇ ಮಾತನಾಡುತ್ತಿದ್ದಾರೆ.
    ರಾಜ್ಯಸರ್ಕಾರದ ವೈಫಲ್ಯ ಹಾಗೂ ಕೇಂದ್ರದ ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸುವ ಜವಾಬ್ದಾರಿ,ಹಿಂದೆಂದಿಗಿಂತಲೂ ಈಗ ಕಾರ‌್ಯ ಕರ್ತರ ಮೇಲೆ ಹೆಚ್ಚಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆಗಳನ್ನು ಜನರಿಗೆ ತಿಳಿಸದೆ ಪಕ್ಷಕ್ಕೆ ಹಿನ್ನಡೆಯಾಗಿತ್ತು, ಈ ಲೋಪ ಮತ್ತೆ ಮರುಕಳಿಸಬಾರದು.
    ವೈಎಸ್‌ಆರ್‌ಪಿ ಸಂಸದರೊಬ್ಬರು,ಈ ಚುನಾವಣೆಯಲ್ಲಿ ಕಾಂಗ್ರೆಸ್ 40ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ. 2029ರ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ ಎಂದು ಅಧಿವೇಶನದಲ್ಲೇ ಹೇಳಿದ್ದಾರೆ. ಮೋದಿ ಸರ್ಕಾರ ದೇಶದ 80 ಕೋಟಿ ಜನರಿಗೆ ಅಕ್ಕಿ ವಿತರಿಸುತ್ತಿದೆ.
    ಕಾಂಗ್ರೆಸ್ ಶಾಸಕರೊಬ್ಬರು ಲೋಕಸಭಾ ಚುನಾವಣೆ ಗೆಲ್ಲದಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸುವುದಾಗಿ ಹೇಳುತ್ತಿದ್ದಾರೆ. ದೇಶದ ಅಖಂಡ ತೆಗಾಗಿ ಮೋದಿ ಮತ್ತೆ ಪ್ರಧಾನಿ ಆಗಬೇಕಿದೆ,ಕೇಂದ್ರ ಸಾಧನೆಗಳನ್ನು ಜನರಿಗೆ ತಿಳಿಸಲು ಕಾರ‌್ಯಕರ್ತರಿಗೆ ಯಾವುದೇ ಸಂಕೋಚ ಬೇಡ. ವಿಧಾಸಭಾ ಚುನಾವಣೆ ಹಿನ್ನೆಡೆಗೆ ನಮ್ಮ ಕೆಲವು ತಪ್ಪುಗಳೂ ಕಾರಣವಾಗಿವೆ ಎಂದರು.
    ರಾಜ್ಯಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ,ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸದಿದ್ದರೆ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದಾಗಿ ಕಾಂಗ್ರೆಸ್,ಬ್ಲಾಕ್ ಮೇಲ್ ಮಾಡುತ್ತಿದೆ. ಈ ಚುನಾವಣೆ ಬಳಿಕ ಗ್ಯಾರಂಟಿಗಳು ಸ್ಥಗಿಗೊಳ್ಳಲಿವೆ. ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ಸಿನ ದೇಶಕ್ಕೆ ಏನು ಮಾಡಿದೆ ಎಂಬುದನ್ನು ಹಾಗೂ ಮೋದಿ ಅವರ ಸಾಧನೆಗಳನ್ನು ಜನರಿಗೆ ತಿಳಿಸಬೇಕಿದೆ.ದೇಶಕ್ಕಾಗಿ ನಾವೇನು ಮಾಡಬೇಕು ಎಂಬುದನ್ನು ಪ್ರಶ್ನಿಸಿಕೊಳ್ಳುವ ಮೂಲಕ,ಅಭಿಯಾನದ 45 ದಿನಗಳ ಕಾಲ ಕಾರ‌್ಯಕರ್ತರು ಬಿಜೆಪಿ ಗೆಲು ವಿಗೆ ಶ್ರಮಿಸಬೇಕಿದೆ.
    ನಮ್ಮ ಅಭ್ಯರ್ಥಿ ಮೋದಿ,ಚಿತ್ರದುರ್ಗಕ್ಕೆ ಅಭ್ಯರ್ಥಿ ಯಾರೇ ಅಗಲಿ ಅವರನ್ನು ಗೆಲ್ಲಿಸೋಣ.ಭಾರತ್ ಜೋಡೋ ಎಂದು ರಾಹುಲ್ ಗಾಂಧಿ ಒಂದೆಡೆ ಪಾದಯಾತ್ರೆ ನಡೆಸಿದ್ದರೆ, ಮತ್ತೊಂದೆಡೆ ದೇಶವನ್ನು ಒಡೆಯುವ ಮಾತನ್ನು ಅವರ ಸಂಸದರೊಬ್ಬರು ಆಡಿದ್ದಾರೆ. ಈ ಕುರಿತಂತೆ ದೇಶದ ಜನರು ಎಚ್ಚರ ವಹಿಸಬೇಕಿದೆ.
    ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಕಾರ‌್ಯಕರ್ತರಲ್ಲಿ ಹೊಸ ಉತ್ಸಾಹ ಕಾಣಿಸಿದೆ. ರಾಮಮಂದಿರ ಉದ್ಘಾಟಿ ಸಿದ ಮೋದಿ ಅವರು 500 ವರ್ಷಗಳ ಭಾರತೀಯರ ಕನಸನ್ನು ನನಸು ಗೊಳಿಸಿದ್ದಾರೆ, ಸನಾತನ ಧರ್ಮವನ್ನು ಎತ್ತಿಹಿಡಿದಿದ್ದಾರೆ ಎಂದ ರು.
    ಅಭಿಯಾನದ ಜಿಲ್ಲಾ ಸಂಚಾಲಕ ಡಾ.ಸಿದ್ದಾರ್ಥಗುಂಡಾರ್ಫಿ ಮಾತನಾಡಿ,ಇನ್ನೂ ಒಂದೂವರೆ ತಿಂಗಳ ಕಾಲ ಕಾರ‌್ಯಕರ್ತರು ಬಿಜೆಪಿ ಸಾಧನೆಗಳನ್ನು ಮನೆ,ಮನೆಗೆ ತಿಳಿಸಲು ಶ್ರಮಿಸಬೇಕಿದೆ ಎಂದರು.
    ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ,ಅಭಿಯಾನದ ಸಂದರ್ಭ ದಲ್ಲಿ ಕಾರ‌್ಯಕರ್ತರು ಮತ್ತೊಂದು ಗ್ರಾಮದಲ್ಲಿ 24 ತಾಸುಗಳ ಕಾ ಲ ಇದ್ದು ಜನರಿಗೆ ಕೇಂದ್ರದ ಸಾಧನೆಗಳನ್ನು ತಿಳಿಸಬೇಕೆಂದರು.
    ಕುಡಾ ಮಾಜಿ ಅಧ್ಯಕ್ಷ ಸುರೇಶ್‌ಸಿದ್ದಾಪುರ,ನಗರಸಭೆ ಸದಸ್ಯರಾದ ಶ್ರೀನಿವಾಸ್,ಸುರೇಶ್,ನವೀನ್‌ಚಾಲುಕ್ಯ,ಕಲ್ಲೇಶಯ್ಯ,ಶಿವಣ್ಣ, ಶೈಲ ಜಾರೆಡ್ಡಿ,ಆನಂದ್,ವೀಣಾ,ಶೀಲಾ,ಭಾರ್ಗವಿದ್ರಾವಿಡ್,ತಿಮ್ಮಣ್ಣ,ರಮೇಶ್,ರವಿಕುಮಾರ್,ಸಂಪತ್‌ಕುಮಾರ್ ಮತ್ತಿತರರು ಪಕ್ಷದ ಪ್ರಮು ಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts