More

    ಮೈಸೂರು ಪಾಲಿಕೆ: ವರ್ಷಾಂತ್ಯಕ್ಕೆ 165 ಕೋಟಿ ತೆರಿಗೆ ಸಂಗ್ರಹ ಗುರಿ

    ಮೈಸೂರು: ಪ್ರಸ್ತಕ ಸಾಲಿನ ಆರ್ಥಿಕ ವರ್ಷದ 5 ತಿಂಗಳಲ್ಲಿ 120 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ವರ್ಷಾಂತ್ಯಕ್ಕೆ 165 ಕೋಟಿ ರೂ. ಸಂಗ್ರಹಿಸುವ ಗುರಿ ಇದೆ ಎಂದು ಕಂದಾಯ ವಿಭಾಗದ ಉಪ ಆಯುಕ್ತ ದಾಸೇಗೌಡ ಮಾಹಿತಿ ನೀಡಿದರು.

    ಆಸ್ತಿ ತೆರಿಗೆ ಸಂಗ್ರಹಿಸುವ ಆರ್‌ಐ, ಬಿಲ್ ಕಲೆಕ್ಟರ್ ಸೇರಿ 138 ಹುದ್ದೆಗಳಲ್ಲಿ ಶೇ.50 ಸಿಬ್ಬಂದಿ ಮಾತ್ರ ಇದ್ದಾರೆ. ಎರಡ್ಮೂರು ವಾರ್ಡ್‌ಗಳಿಗೆ ಒಬ್ಬ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ನಡುವೆಯೂ 5 ತಿಂಗಳಲ್ಲಿ ಶೇ. 60ರಷ್ಟು ತೆರಿಗೆ ಸಂಗ್ರಹವಾಗಿದೆ ಎಂದು ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.

    ಆನ್‌ಲೈನ್ ಪೇಮೆಂಟ್ ತಾಂತ್ರಿಕ ಸಮಸ್ಯೆ ಬಗ್ಗೆ ಮೇಯರ್ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಆನ್‌ಲೈನ್ ಪೇಮೆಂಟ್‌ನಲ್ಲಿ 2ರಿಂದ 3 ತಿಂಗಳು ತಡವಾಗುತ್ತಿದೆ. ಇದಕ್ಕೆ ಕಾರಣಗಳೇನು? ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

    ಈಗ ಸಂಗ್ರಹವಾಗಿರುವ 120 ಕೋಟಿ ರೂ. ಆಸ್ತಿ ತೆರಿಗೆಯಲ್ಲಿ 45 ಕೋಟಿ ರೂ. ಆನ್‌ಲೈನ್ ಪೇಮೆಂಟ್‌ನಿಂದಲೇ ಸಂಗ್ರಹಿಸಲಾಗಿದೆ. ಆರ್ಥಿಕ ವರ್ಷದ ಕೊನೇ ತಿಂಗಳಾದ ಏಪ್ರಿಲ್ ಮತ್ತು ಮೇನಲ್ಲಿ ಸಮಸ್ಯೆ ಇತ್ತು. ಈಗ ಯಾವ ತೊಂದರೆಯೂ ಇಲ್ಲ ಎಂದು ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts