More

    ಮೇಲುಕೋಟೆಯಲ್ಲಿ ವಿಜೃಂಭಣೆಯ ರಾಜಮುಡಿ ಉತ್ಸವ

    ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವ ಪ್ರಯುಕ್ತ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ರಾಜಮುಡಿ ಉತ್ಸವ ವೈಭದಿಂದ ನಡೆಯಿತು.
    ಜಿಲ್ಲಾಧಿಕಾರಿ ಡಾ.ಎಚ್.ಎನ್ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ವೈರಮುಡಿ ಕಿರೀಟವನ್ನು ದೀಪದ ಬೆಳಕಿನಲ್ಲಿ ಪರಿಶೀಲಿಸಿ ಖಚಿತಪಡಿಸಿದ ನಂತರ ಪೆಟ್ಟಿಗೆಯಲ್ಲಿಟ್ಟು ಮೊಹರು ಮಾಡಿದ ಬಳಿಕ ದೇವಾಲಯದ ಬೊಕ್ಕಸದಲ್ಲಿ ಇಡಲಾಯಿತು. ಬೆಳಗ್ಗೆ 10 ಗಂಟೆಗೆ ಸ್ಥಾನೀಕರು, ಅರ್ಚಕರು, ಮಠಮುದ್ರೆಯವರ ಸಮಕ್ಷಮದಲ್ಲಿ ಪೆಟ್ಟಿಗೆಯ ಮೊಹರನ್ನು ಪರಿಶೀಲಿಸಲಾಯಿತು. ಬಳಿಕ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್ ಮಹೇಶ್ ಮೂಲಕ ಜಿಲ್ಲಾ ಖಜಾನೆಗೆ ಪೊಲೀಸ್ ಭದ್ರತೆಯಲ್ಲಿ ಮರಳಿ ಕಳುಹಿಸಿಕೊಡಲಾಯಿತು.
    ಈ ವೇಳೆ ಪ್ರಥಮ ಸ್ಥಾನೀಕರಾದ ಕರಗಂ ನಾರಾಯಣ ಅಯ್ಯಂಗಾರ್, ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಸಜ್ಜೆಹಟ್ಟಿ ತಿರುನಾರಾಯಣಯ್ಯಂಗಾರ್, ಮುಕುಂದನ್, ಸಂಪತ್ಕುಮಾರನ್, ಶ್ರೀರಾಮನ್, ಪರಿಚಾರಕ ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು. ಇದಕ್ಕೂ ಮುನ್ನ ವಾಹನೋತ್ಸವಮಂಟಪದಲ್ಲಿ ವೈರಮುಡಿ ಉತ್ಸವ ಮುಗಿಯುತ್ತಿದ್ದಂತೆ ರಾಜಮುಡಿ ಕಿರೀಟ ಧರಿಸಿ ಉತ್ಸವ ನೆರವೇರಿಸಲಾಯಿತು. ನಂತರ ಪಡಿ ಎತ್ತುವುದರೊಂದಿಗೆ ವೈರಮುಡಿ ಉತ್ಸವ ಮುಕ್ತಾಯವಾದವು.

    ಜಿಲ್ಲಾಧಿಕಾರಿ ಕೃತಜ್ಞತೆ: ವೈರಮುಡಿ ಉತ್ಸವ ಯಶಸ್ವಿಯಾಗಿ ನಡೆಯಲು ಕಾರಣರಾದ ಚೆಲುವನಾರಾಯಣಸ್ವಾಮಿ ದೇಗುಲದ ಸ್ಥಾನೀಕರು, ಅರ್ಚಕರು, ಕೈಂಕರ್ಯಪರರು ಹಾಗೂ ದೇಗುಲದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್ ಗೋಪಾಲಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ.
    ಇದೇ ವೇಳೆ ಜಿಲ್ಲಾಡಳಿತದ ನಿರ್ದೇಶನದಂತೆ ಉತ್ಸವದ ಯಶಸ್ಸಿಗೆ ಶ್ರಮಿಸಿದ ಪೊಲೀಸ್, ಕಂದಾಯ, ಲೋಕೋಪಯೋಗಿ, ಆರೋಗ್ಯ ಇಲಾಖೆ, ಸೆಸ್ಕ್, ಸಾರಿಗೆ ಸಂಸ್ಥೆ, ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈರಮುಡಿ ಬ್ರಹ್ಮೋತ್ಸವ ಏ. 8ರವರೆಗೆ ನಡೆಯಲಿದ್ದು, ಎಲ್ಲರೂ ಇದೇ ರೀತಿ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.

    ಮೇಲುಕೋಟೆ ವೈರಮುಡಿ ಕರ್ನಾಟಕದ ಅಪರೂಪದ ಉತ್ಸವವವಾಗಿದೆ. ಇಂತಹ ಮಹೋತ್ಸವದಲ್ಲಿ ಭಾಗಿಯಾಗಿ ದರ್ಶನ ಪಡೆದದ್ದು, ರಾಜಮುಡಿ ಕಿರೀಟ ಪರ್ಕಾವಣೆಯಲ್ಲಿ ಪಾಲ್ಗೊಂಡಿದ್ದು, ಜೀವನದಲ್ಲಿ ಮರೆಯಲಾದ ದಿನ. ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ನನ್ನ ಸಹಕಾರ ಸಂಪೂರ್ಣ ಇದೆ.

    • ಕುಮಾರ ನಾಯಕ್, ಹೆಚ್ಚುವರಿ ಕಾರ್ಯದರ್ಶಿ

    02 ಎಂವೈಎಸ್ 05: ಮೇಲುಕೋಟೆಯಲ್ಲಿ ರಾಜಮುಡಿ ಧರಿಸಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
    02 ಎಂವೈಎಸ್ 05: ವೈರಮುಡಿ ಉತ್ಸವದಂದು ದೇವಾಲಯದ ಸುತ್ತ ನೆರೆದಿದ್ದ ಭಕ್ತಸಮೂಹ. (ಚಿತ್ರ ಮಧು ಮಂಡ್ಯ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts