More

    ಮುರುಘಾ ಶರಣರು ಪೀಠ ತ್ಯಜಿಸಲಿ, ದಸಂಸ ಆಗ್ರಹ

    ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಬಂಧಿತ, ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ಆರೋಪಮುಕ್ತ ಆಗುವವರೆಗೆ ಪೀಠ ತ್ಯಜಿಸಬೇಕೆಂದು ಕರ್ನಾಟಕ ದಲಿತ ಸಂಪರ್ಘ ಸಮಿತಿಯ ಜಿಲ್ಲಾ ಸಂಚಾಲಕ ಟಿ.ರವಿಕುಮಾರ್ ಆಗ್ರಹಿಸಿದರು.

    ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಹೀಗಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪದ ಸತ್ಯಾಸತ್ಯತೆ ಬಹಿರಂಗವಾಗಬೇಕು. ಇದಕ್ಕಾಗಿ ದಕ್ಷ, ಪ್ರಾಮಾಣಿಕ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂದು ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರ ಹೇಳಿಕೆ ಬಗ್ಗೆ ವಿಶ್ಲೇಷಣೆ ಆಗಬೇಕು. ಈ ಎರಡೂ ಅಂಶಗಳ ಬಗ್ಗೆ ತನಿಖಾಧಿಕಾರಿಗಳು ವಿಚಾರಣೆ ನಡೆಸಬೇಕು. ಸಾಮಾನ್ಯ ಆರೋಪಿಯಂತೆ ಅವರ ವಿರುದ್ಧವೂ ಪೊಲೀಸರು ಕಾನೂನುಕ್ರಮ ಕೈಗೊಳ್ಳಬೇಕು. ಒತ್ತಡಕ್ಕೆ ಮಣಿಯಬಾರದು ಎಂದು ಹೇಳಿದರು.

    ಆರೋಪದ ಗಂಭೀರತೆ ಪಕ್ಕಕ್ಕಿಟ್ಟು ಕೆಲವರು ಸಂಧಾನಕ್ಕೆ ಬಹಿರಂಗವಾಗಿ ಓಡಾಡುತ್ತಿರುವುದು, ಮುರುಘಾ ಶರಣರು ಯಾವುದೇ ತಪ್ಪು ಮಾಡಿಲ್ಲ ಎಂದು ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಹಾಗೆ ಹೇಳಿಕೆ ನೀಡುವವರ ವಿರುದ್ಧವೂ ಕೇಸ್‌ ದಾಖಲಿಸಬೇಕು. ಸಂತ್ರಸ್ತ ಬಾಲಕಿಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಒಂದು ಕೋಟಿ ರೂ. ಪರಿಹಾರ ನೀಡಬೇಕು. ಅವರ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ವಹಿಸಬೇಕು. ಸರ್ಕಾರಿ ನೌಕರಿಯ ಖಾತ್ರಿಯ ಭರವಸೆ ನೀಡಬೇಕೆಂದು ಒತ್ತಾಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಎಚ್‌. ಮಲ್ಲಿಕಾರ್ಜುನ ವಂದಾಲಿ, ರಾಘವೇಂದ್ರ ಡಿ. ಕಡೇಮನಿ, ಹಾಲುವರ್ತಿ ನಾಗರಾಜ್‌, ಹನುಮಂತ ಹುಚ್ಚವ್ವನಹಳ್ಳಿ, ತಿಪ್ಪೇಸ್ವಾಮಿ, ಗುಡಾಳು ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts