More

    ಮುರಾರ್ಜಿ ಶಾಲೆಯಲ್ಲಿ ತಾಯಿ-ಮಕ್ಕಳ ಸಮಾಗಮ

    ಶಿರಾಳಕೊಪ್ಪ: ಬೆಲವಂತನಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಸಭೆಯಲ್ಲಿ 270ಕ್ಕೂ ಹೆಚ್ಚು ತಾಯಂದಿರು ಆಗಮಿಸಿದ್ದರು. ಮಕ್ಕಳು ತಾಯಂದಿರ ಪಾದಪೂಜೆ ನಡೆಸಿದರು. ಇದೇ ವೇಳೆ ತಾಯಂದಿರಿಗಾಗಿ ಆಕಷರ್ಕ ಆಟಗಳನ್ನು ಆಯೋಜಿಸಲಾಗಿತ್ತು.
    ಪ್ರಾಚಾರ್ಯ ಕರಿಬಸಪ್ಪ ಮತ್ತು ಮಕ್ಕಳ ತಾಯಂದಿರು ಕಾರ್ಯಕ್ರಮ ಉದ್ಘಾಟಿಸಿದರು. ಪಾಲಕಿ ತಡಗಣಿಯ ತನುಜಾ ಮಾತನಾಡಿ, ವಿದ್ಯಾರ್ಥಿಗಳ ಸವರ್ತೋಮುಖ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಮನೆಯೇ ಮೊದಲ ಪಾಠಶಾಲೆ, ಜನನಿ ಮೊದಲ ಗುರು ಎಂಬ ಮಾತಿನಂತೆ ಇಲ್ಲಿಯ ಮುರಾರ್ಜಿ ಶಾಲೆ ತಾಯಂದಿರಿಗೆ ಆಯೋಜಿಸಿರುವ ಕಾರ್ಯಕ್ರಮ ಅಥರ್ಪೂರ್ಣವಾಗಿದೆ ಎಂದರು.
    ಕುಸುಮಾ ಭಾರಂಗಿ, ಶಿಕ್ಷಕರಾದ ಕೃಷ್ಣ, ಮಮತಾ, ಎಚ್.ವಿರುಪಾಕ್ಷಪ್ಪ, ಆಸ್ಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts