More

    ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ತೀರ್ಮಾನ

    ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿಎಂ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ವನಿಸುತ್ತಾರೆ. ಡಿ.ಕೆ. ಶಿವಕುಮಾರ ನಮ್ಮ ಪಕ್ಷದ ಅಧ್ಯಕ್ಷರು, ಅವರ ಜನ್ಮದಿನವನ್ನೂ ಮಾಡುತ್ತೇವೆ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಶಾಸಕ ಜಮೀರ ಅಹ್ಮದ್ ತಿಳಿಸಿದರು.

    ನಗರದಲ್ಲಿ ಸೋಮವಾರ ಸಿದ್ದರಾಮೋತ್ಸವ ಸಮಾರಂಭಕ್ಕೆ ಜಿಲ್ಲೆಯ ಕಾರ್ಯಕರ್ತರನ್ನು ಆಹ್ವಾನಿಸಲು ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮದು ಹೈಕಮಾಂಡ್ ಪಕ್ಷ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಮ್ಮ ನಾಯಕರು. ಯಾರು ಮುಖ್ಯಮಂತ್ರಿ ಅನ್ನೋದನ್ನು ಅವರು ತೀರ್ಮಾನ ಮಾಡುತ್ತಾರೆ. ಅವರು ಹಾಕಿದ ಗೆರೆಯನ್ನು ನಾವು ದಾಟುವುದಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಹೇಳಿಕೆ ಸಮರ್ಥಿಸಿಕೊಂಡರು.

    ಮುಂದೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಜನ್ಮದಿನವನ್ನು ಮಾಡುತ್ತೇವೆ. ಅಭಿಮಾನಿಗಳ ಒತ್ತಡದಿಂದ ಸಿದ್ದರಾಮಯ್ಯ ಅವರ 75ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಇದನ್ನು ಕಾಂಗ್ರೆಸ್ ಪಕ್ಷದಿಂದ ಅವರ ಅಭಿಮಾನಿಗಳೆಲ್ಲ ಸೇರಿಕೊಂಡು ಮಾಡುತ್ತಿದ್ದೇವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ, ಎಂ.ಬಿ. ಪಾಟೀಲ ಸೇರಿ ಕಾಂಗ್ರೆಸ್​ನ ಎಲ್ಲ ನಾಯಕರು ಪಾಲ್ಗೊಳ್ಳುತ್ತಿದ್ದಾರೆ ಎಂದರು.

    ನನ್ನ ರಾಜಕೀಯ ಗುರು ದೇವೇಗೌಡರು: ನಾನು ರಾಜಕೀಯಕ್ಕೆ ಬರಲು ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಕಾರಣ. ನಾನು ಆ ಮಠದ ಶಿಷ್ಯ. ಅಲ್ಲಿಯೇ ಬಾಲ್ಯ ಕಳೆದಿದ್ದೇನೆ. ಬೆಳಗ್ಗೆಯಿಂದ ಸಂಜೆವರೆಗೆ ಮಠದಲ್ಲೇ ಬೆಳೆದಿದ್ದೇನೆ. ಒಕ್ಕಲಿಗರ ಮಠದಲ್ಲಿ ಬೆಳೆದವ ನಾನು. ಅಲ್ಲಿನ ಗುರುಗಳೇ 2002ರಲ್ಲಿ ದೇವೇಗೌಡರ ಜತೆಗೆ ರಾಜಕೀಯಕ್ಕೆ ಕಳಿಸಿದರು. ದೇವೇಗೌಡರು ನನಗೆ ರಾಜಕೀಯ ಕಲಿಸಿದ ಗುರುಗಳು. 2005ರ ಚಾಮರಾಜಪೇಟೆ ಉಪಚುನಾವಣೆಯಲ್ಲಿ ನನ್ನನ್ನು ನಿಲ್ಲಿಸಿ ದಿನದ 14 ತಾಸು ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದರು. ಈಗ ನನ್ನ ವಿರುದ್ಧ ಸಚಿವ ಆರ್. ಅಶೋಕ ಹೇಳಿಕೆ ನೀಡುತ್ತಿರುವುದು ಸರಿಯಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಜಾತಿಯವರ ಪರವಾಗಿದೆ. ಒಕ್ಕಲಿಗರ ವಿರುದ್ಧ ನಾನು ಏನು ಮಾತಾಡಿದ್ದೇನೆ ? ನಾನು ಪಾಲಿಟಿಕ್ಸ್​ಗೆ ಬರೋಕೆ ಕಾರಣವೇ ಒಕ್ಕಲಿಗರ ಸ್ವಾಮೀಜಿ, 4 ಬಾರಿ ಶಾಸಕ, 2 ಬಾರಿ ಮಂತ್ರಿಯಾಗಿದ್ದೇನೆ. ಅಶೋಕ ಅವರಿಗೆ ಸಿಎಂ ಆಗುವ ಆಸೆ. ಸಿ.ಟಿ. ರವಿ ತಾನು ಸಿಎಂ ಆಗಬೇಕು ಎನ್ನುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ ಅವರ ಹೇಳಿಕೆಗೆ ಜಮೀರ್ ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts