More

    ಮುಂದಿನ ಪೀಳಿಗಾಗಿ ಪರಿಸರ ಉಳಿಸಿ

    ಸೋಮವಾರಪೇಟೆ: ಪ್ರಕೃತಿ ಮತ್ತು ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಜವಾಬ್ದಾರಿಯನ್ನು ಯುವ ಜನಾಂಗ ಮತ್ತು ಮಕ್ಕಳು ಹೊರಬೇಕಾಗಿದೆ ಎಂದು ಕಲಾವಿದ ಮತ್ತು ಪಕ್ಷಿತಜ್ಞರಾದ ಹಾಸನದ ಬಿ.ಎಸ್.ದೇಸಾಯಿ ಹೇಳಿದರು.

    ನಾವು ಪ್ರತಿಷ್ಠಾನದಿಂದ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶನಿವಾರ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಹಕ್ಕಿಗೊಂದು ಗುಟುಕು ಅಭಿಯಾನ-2023ರ ಸಮಾರೋಪ ಸಮಾರಂಭ ಹಾಗೂ ಪಕ್ಷಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

    ಪ್ರಕೃತಿ ಮಾತೆ ಬಳಲಿದ್ದಾಳೆ. ಭೂಮಿ ಮೇಲೆ ಮನುಷ್ಯರು ಹಾಗೂ ಇತರ ಜೀವಿಗಳು ಬದುಕಬೇಕು. ಪ್ರಾಣಿಗಳಿಂದ ಪರಿಸರ ಮತ್ತು ಪ್ರಕೃತಿ ನಾಶವಾಗುತ್ತಿಲ್ಲ. ಪ್ರಕೃತಿ ನಾಶದಲ್ಲಿ ಮಾನವನ ಕೊಡುಗೆ ಅಪಾರ. ದಟ್ಟವಾದ ಕಾಡನ್ನು ಮಾನವನಿಂದ ಸೃಷ್ಟಿಸಲು ಸಾಧ್ಯವಿಲ್ಲ. ಅಂತಹ ಕಾಡಿಗೆ ನುಗ್ಗಿ ನಾಶ ಮಾಡಲು ಬಿಡಬಾರದು ಎಂದು ಹೇಳಿದರು.

    ಹಕ್ಕಿಗೊಂದು ಗುಟುಕು ಅಭಿಯಾನದಲ್ಲಿ ಭಾಗವಹಿಸಿ, ಪಕ್ಷಿಗಳಿಗೆ ನೀರು, ಆಹಾರ ಇಟ್ಟು ಸೆಲ್ಫಿ ಕಳುಹಿಸುವ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ವಿರಾಜಪೇಟೆ ಕಾವೇರಿ ಶಾಲೆಯ ಕ್ಷಮಾ ಕಾವೇರಮ್ಮ ಪ್ರಥಮ, ವಿರಾಜಪೇಟೆಯ ಉತ್ತಂಡ ಪೂಜಾ ಜಗತ್ ದ್ವಿತೀಯ, ಮಂಗಳೂರು ಸೂರತ್ಕಲ್‌ನ ಶ್ರೇಯಾಂಕ್ ಜೈನ್ ತೃತೀಯ, ಆಲೂರು ಸಿದ್ದಾಪುರದ ಡಾ.ಸುಪರ್ಣಾ ಅವರು ನಾಲ್ಕನೇ ಸ್ಥಾನ ಪಡೆದುಕೊಂಡರು.

    ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅಧಿಕ ಅಂಕ ಗಳಿಸಿದ ಬುಡಕಟ್ಟು ಸಮುದಾಯ ಮತ್ತು ಬಡವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಿ.ಕೆ.ಪೂಜಾಶ್ರೀ, ಕೆ.ಆರ್.ಭಾರತಿ, ಎ.ಜಿ.ಶಾಲಿನಿ ಅವರಿಗೆ ಪ್ರತಿಷ್ಠಾನದ ಮೂಲಕ ಪ್ರೋತ್ಸಾಹಧನ ವಿತರಿಸಲಾಯಿತು. ಪ್ರತಿಷ್ಠಾನದಿಂದ ವರ್ಷದ ಜೋಡಿ ಹಕ್ಕಿಗಳಾಗಿ ಆಯ್ಕೆಯಾದ ತಾಕೇರಿ ಗ್ರಾಮದ ಡಿ.ಟಿ.ನಿರಂಜನ್, ಚಾಂದಿನಿ ದಂಪತಿಯನ್ನು ಗೌರವಿಸಲಾಯಿತು.

    ವಿವಿಧ ಶಾಲೆ ವಿದ್ಯಾರ್ಥಿಗಳು ಆಗಮಿಸಿ ಪಕ್ಷಿಗಳ ಛಾಯಾಚಿತ್ರಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ವಕೀಲ ಬಿ.ಜೆ.ದೀಪಕ್, ಉದ್ಯಮಿ ಅರುಣ್ ಕೊತ್ತನಳ್ಳಿ, ಬೆಂಗಳೂರು ಮಲೆನಾಡು ಸಂಘದ ನಿರ್ದೇಶಕ ರಂಜನ್‌ಗೌಡ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಚ್.ರಮೇಶ್, ಕಾವೇರಿ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ಎಂ.ಬಿ.ಪ್ರದೀಪ್. ನಾವು ಪ್ರತಿಷ್ಠಾನ ಸಂಸ್ಥಾಪಕ ಗೌತಮ್ ಕಿರಗಂದೂರು ಮತ್ತು ಸುಮನಾ ಗೌತಮ್ ಪ್ರಮುಖರಾದ ರಕ್ಷಿತ್ ಮಲ್ನಾಡ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts