More

    ಮುಂಡಗೋಡ – ಯಲ್ಲಾಪುರ ರಸ್ತೆ ಸಂಚಾರ್ ಬಂದ್

    ಮುಂಡಗೋಡ: ತಾಲೂಕಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದ ಶಿಡ್ಲಗುಂಡಿ ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ವಿುಸಿದ ರಸ್ತೆ ಮೇಲೆ ನೀರಿನ ಪ್ರವಾಹ ಹರಿದು ಬಂದು ವಾಹನ ಸಂಚಾರ ಸ್ಥಗಿತಗೊಂಡಿದೆ.

    ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಆದ ಪ್ರವಾಹದಿಂದ ಶಿಡ್ಲಗುಂಡಿ ಸೇತುವೆಯ ರಸ್ತೆ ಕೊಚ್ಚಿಕೊಂಡು ಹೋಗಿತ್ತು.

    ನಂತರ ಪಿಡಬ್ಲು್ಯಡಿಯವರು ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದರು. ಹುಬ್ಬಳ್ಳಿ-ಧಾರವಾಡಗಳಲ್ಲಿ ಮಳೆಯಾದರೂ ನೀರಿನ ಪ್ರವಾಹ ಹರಿದು ಬಂದು ಶಿಡ್ಲಗುಂಡಿಯ ತಾತ್ಕಾಲಿಕವಾಗಿ ನಿರ್ವಿುಸಿದ ರಸ್ತೆಯ ಮೇಲೆ ಬಂದು ನಿಲ್ಲುತ್ತದೆ. ಇದರಿಂದ ಈಗ ಮತ್ತೆ ಲಘು ವಾಹನಗಳ ಸಂಚಾರ ಸ್ಥಗಿತಗೊಂಡು ಮುಂಡಗೋಡ-ಯಲ್ಲಾಪುರ ಸಂಪರ್ಕ ಕಡಿತಗೊಂಡಿದೆ.

    ಸತತ ಮಳೆಯಾಗುತ್ತಾ ಇದ್ದರೆ ನೀರಿನ ಪ್ರಮಾಣ ಕಡಿಮೆಯಾಗದೇ ಸಂಚಾರಕ್ಕೆ ಅಡ್ಡಿಯಾಗುತ್ತದೆ. ನಂತರ ಮಳೆ ಕಡಿಮೆಯಾಗಿ 3-4 ಗಂಟೆಗಳ ನಂತರ ರಸ್ತೆಯಲ್ಲಿ ನಿಂತ ಮಳೆ ನೀರು ಹರಿದು ಹೋಗಿ ಮತ್ತೆ ಸಂಚಾರ ಸುಗಮವಾಗುತ್ತದೆ ಎಂದು ಪಕ್ಕದ ಮೈನಳ್ಳಿ ಗ್ರಾಮದ ನಿವಾಸಿ ಸಿ.ಕೆ. ಅಶೋಕ ತಿಳಿಸಿದರು.

    ಈಗಾಗಲೇ ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದೆ. 20 ದಿನಗಳವರೆಗೆ ಆರಿಕೆಯಾಗಲು ಅವಧಿ ಇದ್ದು ಇನ್ನು 15 ದಿನಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗುವುದು. ದಯಾನಂದ ಬಿ.ಆರ್. ಪಿಡಬ್ಲು್ಯಡಿ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts