More

    ಮುಂಡಗೋಡಿನ ಇಬ್ಬರು ಕಳ್ಳರ ಬಂಧನ

    ಹಾವೇರಿ: ನಗರದ ಹಾನಗಲ್ಲ ರಸ್ತೆಯಲ್ಲಿನ ಶ್ರೀಕಂಠೇಶ್ವರ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿ, 5.18 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಮುಂಡಗೋಡ ತಾಲೂಕು ಭದ್ರಾಪುರ ಗ್ರಾಮದ ಚಿತ್ರಗಿ ಪ್ಲಾಟ್ ನಿವಾಸಿ ಉಮರ್​ಫಾರೂಕ ಸುಲೇಮಾನ್ ಶೇಖ್(36) ಹಾಗೂ ಮುಂಡಗೋಡ ತಾಲೂಕು ಪಾಳ ಗ್ರಾಮದ ಮಹ್ಮದಜಾಫರ್​ಖಾನ್ ನಾಗ್ರೋಳ್ಳಿ (28) ಬಂಧಿತ ಆರೋಪಿಗಳು. ಇವರು ಜ. 29ರಂದು ಶ್ರೀಕಂಠೇಶ್ವರ ಮಳಿಗೆಯಲ್ಲಿ ಕಿಡಕಿ ಮುರಿದು ಒಳ ಪ್ರವೇಶಿಸಿ 4.59 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾಗೂ ನಗದು ಕಳ್ಳತನ ಮಾಡಿದ್ದರು. ಬಂಧಿತರಿಂದ 2 ಟಿವಿ, 8 ಮೊಬೈಲ್, 1 ಮೈಕ್ರೋಓವನ್ ಇತರೆ ಗೃಹೋಪಯೋಗಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಮಿನಿ ಕಾರು, ಹಾನಗಲ್ಲನಲ್ಲಿ ಕಳ್ಳತನ ಮಾಡಿದ್ದ ಸ್ಪೆ್ಲಂಡರ್ ಫ್ರೋ ಬೈಕ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಎಸ್​ಪಿ, ಎಎಸ್​ಪಿ, ಡಿಎಸ್​ಪಿ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭಾವತಿ ಸೇತಸನದಿ, ಪಿಎಸ್​ಐ ಚಂದನ, ಎಎಸ್​ಐ ಎಸ್.ಡಿ. ಸಾಗರ, ಸಿಬ್ಬಂದಿ ಯಲ್ಲಪ್ಪ ತಹಶೀಲ್ದಾರ್, ಚಂದ್ರಶೇಖರ ಪೂಜಾರ, ಎಂ.ಎಂ. ತುಂಗಳ, ಎಂ.ಜಿ. ದೊಡ್ಡಕಾರಗಿ, ಪಿ.ಕೆ. ಕರಿಯಣ್ಣನವರ, ಗುಡ್ಡಪ್ಪ ಹಳ್ಳೂರ, ರಾಜು ಗೊಂದೆರ, ಸುರೇಶ ಎಂ.ಎಚ್. ಇತರರು ಕಾರ್ಯಾಚರಣೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts