More

    ಮಾಸಿಕ ಗೌರವಧನ ನೀಡಲು ಆಗ್ರಹ -ಸ್ವಾತಂತ್ರ್ಯಯೋಧರು, ಉತ್ತರಾಧಿಕಾರಿಗಳ ಸಂಘದ ಮನವಿ

    ದಾವಣಗೆರೆ: ರಾಜ್ಯದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ವಂಶಸ್ಥರಿಗೆ ಉಭಯ ಸರ್ಕಾರಗಳು ಮಾಸಿಕ ಗೌರವಧನ ನೀಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಉತ್ತರಾಧಿಕಾರಿಗಳ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
    ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿ ಒಂದು ನೆನಪು ಕಾರ್ಯಕ್ರಮದಲ್ಲಿ, ಸ್ವಾತಂತ್ರ್ಯಯೋಧರ ಉತ್ತರಾಧಿಕಾರಿಗಳು ಜಿಲ್ಲಾಧಿಕಾರಿ ಡಾಎಂ.ವಿ.ವೆಂಕಟೇಶ್ ಅವರಿಗೆ ಮನವಿಪತ್ರ ಸಲ್ಲಿಸಿದರು.
    ಸ್ವಾತಂತ್ರ್ಯ ಯೋಧರ ಕುಟುಂಬಗಳನ್ನು ಸ್ವಾತಂತ್ರೃ ಹೋರಾಟಗಾರರ ಪರಿವಾರ ಎಂದು ಘೋಷಿಸಬೇಕು. ಸ್ವಾತಂತ್ರ್ಯ ಯೋಧರ ಮಕ್ಕಳು ಕೃಷಿ ಮಾಡಲು ಉಚಿತವಾಗಿ 5 ಎಕರೆ ಭೂಮಿ ಮಂಜೂರು ಮಾಡಬೇಕು. ಮಕ್ಕಳು-ಮೊಮ್ಮಕಳಿಗೆ ವಸತಿ ಶಾಲೆಗಳಲ್ಲಿ ಶೈಕ್ಷಣಿಕ ಹಾಗೂ ಸರ್ಕಾರಿ ನೌಕರಿಯಲ್ಲಿ ಶೇ.5ರ ಮೀಸಲು ನೀಡಬೇಕು.
    ಅಸ್ಸಾಂ, ಬಿಹಾರ್ ಇತರ ರಾಜ್ಯಗಳ ಮಾದರಿಯಲ್ಲೇ ಈ ಕುಟುಂಬದ ಮಕ್ಕಳು, ಮೊಮ್ಮಕ್ಕಳಿಗೆ ಜಿಲ್ಲಾಡಳಿತದಿಂದ ಉತ್ತರಾಧಿಕಾರಿ ಪ್ರಮಾಣಪತ್ರ ನೀಡಬೇಕು. ಅವರಿಗೆ ಪಂಜಾಬ್ ಮಾದರಿಯಲ್ಲೇ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಹಾಗೂ ಅವರ ಮನೆಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುಶ್ಚಕ್ತಿ ಪೂರೈಸಬೇಕು.
    ಸ್ವಾತಂತ್ರ್ಯ ಹೋರಾಟಗಾರರ ಅಂತ್ಯಸಂಸ್ಕಾರಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ 4 ಸಾವಿರ ರೂ. ಮೊತ್ತವನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು. ಸ್ವಾತಂತ್ರ್ಯ ಯೋಧರು, ಉತ್ತರಾಧಿಕಾರಿಗಳ ಕುಟುಂಬ ಸದಸ್ಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಉಚಿತ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
    ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಮರುಳಸಿದ್ದಪ್ಪ, ಐಗೂರು ತಿಮ್ಮಣ್ಣ, ರಾಘವೇಂದ್ರ ಜಗಳೂರು, ಅಜ್ಜಂಪುರ ಬಸವರಾಜಪ್ಪ, ಇಂದುಶೇಖರ್ ನಿಶಾನಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts