More

    ಮಾರಿಕಾಂಬಾದೇವಿಗೆ ವಿವಿಧ ಸೇವೆ

    ಶಿರಸಿ: ಸಹಸ್ರಾರು ಭಕ್ತರ ಹಷೋದ್ಗಾರದ ನಡುವೆ ಗದ್ದುಗೆಯಲ್ಲಿ ಆಸೀನಳಾದ ಮಾರಿಕಾಂಬಾದೇವಿಗೆ ಗುರುವಾರ ಬೆಳಗ್ಗೆ 5ಗಂಟೆಯಿಂದ ಸೇವಾ ವಿಧಿ ವಿಧಾನಗಳು ಆರಂಭಗೊಂಡಿವೆ. ಭಕ್ತರು ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.

    ಹಾವೇರಿ, ಹಾನಗಲ್ಲ, ಸೊರಬ, ದಾವಣಗೆರೆ ಸೇರಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಗುಜರಾತ್ ಮತ್ತಿತರ ಭಾಗದಿಂದ ಬಂದ ಭಕ್ತರು ನಸುಕಿನಿಂದಲೇ ಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಬಿಡ್ಕಿಬಯಲಿನ ಜಾತ್ರಾ ಮಂಟಪದವರೆಗೂ ಭಕ್ತರು ಸಾಲುಗಟ್ಟಿ ನಿಂತು ಹಣ್ಣು-ಕಾಯಿ, ಕಾಣಿಕೆ, ಹರಕೆ, ತುಲಾಭಾರ ಮತ್ತಿತರ ಸೇವೆಗಳನ್ನು ಸಲ್ಲಿಸಿ ಅಮ್ಮನ ಕೃಪೆಗೆ ಪಾತ್ರರಾದರು.

    ಬೆಳಗ್ಗೆ ಸಾಗರೋಪಾದಿಯಲ್ಲಿ ಇದ್ದ ಭಕ್ತರ ಸಂಖ್ಯೆ ಉರಿ ಬಿಸಿಲಿನ ವೇಳೆಗೆ ಕೊಂಚ ಕಡಿಮೆಯಾಗಿತ್ತು. ಪೂಜೆ ಮುಗಿಸಿದ ನಂತರ ಮಾರಿಕಾಂಬಾ ದೇವಾಲಯ ಹಾಗೂ ಇತರ ಸಂಘ ಸಂಸ್ಥೆಗಳು ಆಯೋಜಿಸಿರುವ ಅನ್ನ-ಪ್ರಸಾದ ಸೇವಿಸಿದರು.

    ವಿವಿಧ ಹರಕೆ ಸೇವೆ: ಶ್ರೀದೇವಿಯ ಸಹೋದರಿಯರಾದ ಮರ್ಕಿ ಮತ್ತು ದುರ್ಗಿಯರ ಸನ್ನಿಧಾನದಿಂದ ಲಕ್ಕಿಸೊಪ್ಪಿನ ಉಡುಗೆ, ಬೇವಿನ ಉಡುಗೆಯುಟ್ಟು ಬಂದ ಅಸಂಖ್ಯ ಭಕ್ತರು ಕುಟುಂಬ ಸಹಿತರಾಗಿ ಹರಕೆ ಅರ್ಪಿಸಿದರು. ಮಾರಿಕಾಂಬೆಯೆದುರು ಬಲಿಕೊಡುವ ಸಂಪ್ರದಾಯ ನಿಷಿದ್ಧವಾಗಿರುವ ಹಿನ್ನೆಲೆಯಲ್ಲಿ ಕುರಿಕೋಳಿಗಳನ್ನು ದೇವಿಗೆ ಸಮರ್ಪಿಸುವ ಕಾರ್ಯವೂ ನಡೆದಿದೆ. ತೆಂಗಿನ ಕಾಯಿ, ಬಾಳೆಗೊನೆ, ಬೆಲ್ಲ, ಕಲ್ಲುಸಕ್ಕರೆ ಸೇರಿ ವಿವಿಧ ಧಾನ್ಯಗಳ ತುಲಾಭಾರ ಸೇವೆಯೋ ನಡೆದಿದೆ. ಅಡಿಗೊಂದು ನಮಸ್ಕಾರ ಮಾಡಿ ಗದ್ದುಗೆಯನ್ನು ಸುತ್ತಿ ಮಡಿಸ್ನಾನದ ಆಚರಣೆಯೂ ಸಾಗಿದೆ. ವಾದ್ಯ, ಡೋಲು-ಡೊಳ್ಳುಗಳನ್ನು ಬಡಿದು ಸೇವೆಯರ್ನ°ಸಿದ ಭಕ್ತರೂ ಕಡಿಮೆಯೇನಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts