More

    ಮಹಿಳಾ ಕಾಲೇಜು, ಪಾಲಿಟೆಕ್ನಿಕ್‍ಗೆ ಮೂಲಸೌಕರ್ಯಕ್ಕೆ ಆಗ್ರಹ

    ಬೀದರ್: ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್‍ಗೆ ಕೂಡಲೇ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
    ಪರಿಷತ್ ಪದಾಧಿಕಾರಿಗಳು ನಗರದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
    ಮಹಿಳಾ ಪದವಿ ಕಾಲೇಜಿನಲ್ಲಿ ಗ್ರಾಮೀಣ ಭಾಗದ 510 ಬಡ ಪ್ರತಿಭಾವಂತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಕಾಲೇಜಿನಲ್ಲಿ ಮೂಲಸೌಕರ್ಯಗಳಿಲ್ಲ. ಕಟ್ಟಡ ಶಿಥಿಗೊಂಡಿದೆ. ತಡೆಗೋಡೆ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇಲ್ಲ ಎಂದು ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ಗಮನ ಸೆಳೆದರು.
    ಕಟ್ಟಡ ದುರಸ್ತಿಪಡಿಸಬೇಕು. ಕಾಲೇಜು ಕಟ್ಟಡ ಕಾಲೇಜಿನ ಹೆಸರಿನಲ್ಲೇ ನೋಂದಣಿ ಮಾಡಿಸಬೇಕು. 5 ಹೆಚ್ಚುವರಿ ಕೋಣೆ, 10 ಶೌಚಾಲಯ, ತಡೆಗೋಡೆ ನಿರ್ಮಿಸಬೇಕು ಎಂದು ಬೇಡಿಕೆ ಮಂಡಿಸಿದರು.
    ಸರ್ಕಾರಿ ಪಾಲಿಟೆಕ್ನಿಕ್ ಜಾಗ ಅತಿಕ್ರಮಣ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೂಡಲೇ ಸಮೀಕ್ಷೆ ನಡೆಸಿ, ಸುತ್ತುಗೋಡೆ ನಿರ್ಮಿಸಬೇಕು. ಕಂಪ್ಯೂಟರ್ ಸೈನ್ಸ್ ಕೋರ್ಸ್‍ಗೆ ತಕ್ಕಂತೆ 5 ಹೆಚ್ಚುವರಿ ತರಗತಿ ಕೋಣೆಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
    ನಗರ ಘಟಕದ ಕಾರ್ಯದರ್ಶಿ ಅಂಬ್ರೇಶ್ ಬಿರಾದಾರ, ಅಪೇಕ್ಷಾ ದಿನಕರ, ಕಾಂಚನಾ ಬಂಡೆ, ಪ್ರಜ್ಞಾ ದಂಡೆ, ಪವನ್, ರಾಜಗೀರಾ, ಮಂಜುನಾಥ ತೆಲಂಗ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts