More

    ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳುತ್ತಿದೆ

    ಬಾಗಲಕೋಟೆ: ಕೊಳವೆ ಮಾರ್ಗದ ಮೂಲಕ ಮನೆ ಮನೆಗೆ ಮನೆ ಅಡುಗೆ ಅನಿಲ ಸಂಪರ್ಕಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಇಂದು ಸಾಕಾರಗೊಳ್ಳುತ್ತಿದೆ. ಸರ್ಕಾರ ಇದಕ್ಕಾಗಿ ಬಾಗಲಕೋಟೆ ನಗರಕ್ಕೆ ೯೫ ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
    ನಗರದ ವಿದ್ಯಾಗಿರಿಯ ಅಕ್ಕಿಮರಡಿ ಲೇಔಟನಲ್ಲಿ ಎಜಿಪಿ ಸಂಸ್ಥೆಯ ಸಹಯೋಗದೊಂದಿಗೆ ಮೊದಲ ದೇಶಿ ಕೊಳವೆ ನೈಸರ್ಗಿಕ ಅನಿಲ ಪೂರೈಕೆ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
    ಮನೆ ಮನೆಗೆ ಪೈಪಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಇದರಿಂದ ಶೇ.೫೦ ರಷ್ಟಯ ಹಣ, ಶಕ್ತಿ ಉಳಿತಾಯವಾಗುತ್ತದೆ. ಇದೀಗ ವಿದ್ಯಾಗಿರಿಯಲ್ಲಿ ಮನೆ ಮನೆಗೆ ಅನಿಲ ಪೂರೈಕೆ ಆರಂಭಿಸಲಾಗಿದೆ. ಆದ್ದರಿಂದ ಏಜೆನ್ಸಿಯ ಅಽಕಾರಿಗಳು ಉಳಿದ ಕಾರ್ಯವನ್ನು ತ್ವರಿತವಾಗಿ ಗುರಿ ಮುಟ್ಟಬೇಕು ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಗದೀಶ ಬುರ್ಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಸೇರಿದಂತೆ ನಗರಸಭೆ ಸದಸ್ಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts