More

    ಮನೆ ಮನೆಗೆ ಮಾಂಸ, ಮೊಟ್ಟೆಮಾರಾಟ

    ಹುಬ್ಬಳ್ಳಿ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಗರದಲ್ಲಿ ಸೋಮವಾರ ಸಂಚಾರಿ ಮಾಂಸ ಮಾರಾಟಕ್ಕೆ ಚಾಲನೆ ನೀಡಲಾಯಿತು. ಲಾಕ್​ಡೌನ್ ಹಿನ್ನೆಲೆಯಲ್ಲಿ ವಾಹನದಲ್ಲಿ ಮನೆ ಮನೆಗೆ ಕೋಳಿ, ಕುರಿ ಮಾಂಸ ಹಾಗೂ ಮೊಟ್ಟೆ ತಲುಪಿಸುವ ವ್ಯವಸ್ಥೆ ಇದಾಗಿದೆ.
    ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಲಾಕ್​ಡೌನ್ ಅವಧಿಯಲ್ಲಿ ಮೀನು, ಮಾಂಸ ಅಂಗಡಿಗಳು ಬಂದ್ ಇವೆ. ಹೋಮ್ ಡೆಲಿವರಿಗೆ ಅವಕಾಶ ನೀಡಿದ್ದೇವೆ. ಆದರೆ, ಶುಚಿ-ರುಚಿಯಾದ ಮಾಂಸಕ್ಕೆ ಬೇಡಿಕೆ ಇರುವುದರಿಂದ ಹಾಗೂ ರಂಜಾನ್ ಮಾಸಾಚರಣೆ ನಿಮಿತ್ತ ಸಂಚಾರಿ ಮಾಂಸ ಮಾರಾಟ ವ್ಯವಸ್ಥೆಗೆ ಅನುಮತಿ ನೀಡಿದ್ದೇವೆ ಎಂದು ತಿಳಿಸಿದರು.

    ಸದ್ಯ ಪ್ರತಿ ಕೆಜಿ ಕುರಿ ಮಾಂಸಕ್ಕೆ 700 ರೂ. ಹಾಗೂ ಕೋಳಿ ಮಾಂಸಕ್ಕೆ 220 ರೂ. ಬೆಲೆ ನಿಗದಿ ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಗಟು ಮಾರಾಟಗಾರರಿಂದ ಕುರಿ, ಕೋಳಿ ಪಡೆದು ಬೆಲೆ ಇಳಿಕೆ ಮಾಡುವಂತೆ ನಿಗಮಕ್ಕೆ ಸೂಚಿಸಿದ್ದೇವೆ. ಧಾರವಾಡದಲ್ಲಿಯೂ ಇದೇ ರೀತಿಯ ಸಂಚಾರಿ ವಾಹನಕ್ಕೆ ವ್ಯವಸ್ಥೆ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ವಾಹನಗಳ ಸಂಖ್ಯೆ ಹೆಚ್ಚಿಸಲಿದ್ದೇವೆ ಎಂದು ಹೇಳಿದರು.

    ನಿಗಮದ ಸಹಾಯಕ ನಿರ್ದೇಶಕ ಡಾ. ಸುನೀಲಕುಮಾರ ಮಾತನಾಡಿ, ವಾಹನದಲ್ಲಿ ರೆಫ್ರಿಜರೇಶನ್ ವ್ಯವಸ್ಥೆ ಇದ್ದು ಮಾಂಸ ಕೆಡುವುದಿಲ್ಲ. ಕುರಿ-ಕೋಳಿ ಸೇರಿ 40 ಕೆಜಿ ಮಾಂಸ ಸಂಗ್ರಹ ಮಾಡಬಹುದಾಗಿದೆ. ಪಾಲಿಕೆ ಹಾಕಿಕೊಟ್ಟ ಮಾರ್ಗ ನಕ್ಷೆಯಲ್ಲಿ ತೆರಳಿ ಮಾರಾಟ ಮಾಡಲಿದ್ದೇವೆ ಎಂದರು. ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts