More

    ಮನುಷ್ಯನ ಜೀವನದಲ್ಲಿ ಸಂಪತ್ತು ಗಳಿಕೆಗಿಂತ ಸಾಧನೆಯೇ ಶಾಶ್ವತ

    ಬೀರೂರು: ಜೀವನದಲ್ಲಿ ಸಂಪತ್ತು ಗಳಿಸುವ ಜತೆಗೆ ದಾನ-ಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಾಗ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಬೀರೂರು ಖಾಸಾ ಶಾಖಾ ಮಠದ ಶಿವಾನಂದ ಆಶ್ರಮ ಟ್ರಸ್ಟ್​ನಿಂದ ಮರುಳಸಿದ್ದೇಶ್ವರ ಗದ್ದಿಗೆ ಆವರಣದಲ್ಲಿ ಭಾನುವಾರ 55 ಲಕ್ಷ ರೂ. ವೆಚ್ಚದ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆಗೊಳಿಸಿ ಮಾತನಾಡಿದರು.

    ರಂಭಾಪುರಿ ಪೀಠಗಳಲ್ಲಿ ಬೀರೂರು ಶಾಖಾ ಮಠ ಬೆಳ್ಳಿ ಎಂಬ ನಾಣ್ಣುಡಿ ಇದೆ. ಮಠ-ಮಂದಿರಗಳ ಅಭಿವೃದ್ಧಿಗೆ ಪ್ರತಿಯೊಬ್ಬ ಸಣ್ಣ ಪ್ರಮಾಣದ ಭಕ್ತರಿಂದಲೂ ಸಹಕಾರ ಸಿಗಬೇಕು. ದೇವಸ್ಥಾನಗಳು, ಮಠಗಳು ಹಿಂದುತ್ವ ಉಳಿಸುವ ಕೇಂದ್ರಗಳು. ಧರ್ಮ ಇಲ್ಲದೆ ಜಗತ್ತಿಲ್ಲ. ಭಾರತೀಯರ ದಿನಚರಿಗಳು ಧರ್ಮದ ಮೇಲೆ ನಿಂತಿವೆ ಎಂಬುದನ್ನು ಮರೆಯಬಾರದು. ಇಂದಿನ ಆಧುನಿಕ ಯುಗದಲ್ಲಿ ಉತ್ತಮ ಆಚಾರ-ವಿಚಾರಗಳನ್ನು ಕಲಿಸಲು ಧರ್ಮದ ಹಾದಿ ಮುಖ್ಯ. ಬಹಳಷ್ಟು ಭಕ್ತರ ಸಹಕಾರದಿಂದ ಇಂದು 55 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ಸ್ಥಾಪನೆಯಾಗಿದೆ. ಮುಂದಿನ ದಿನಗಳಲ್ಲಿ ಮಠದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿ, ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಗದ್ದಿಗೆ ಆವರಣದಲ್ಲಿ ಸಮುದಾಯ ಭವನ ನಿರ್ವಣಕ್ಕೆ ಶಾಸಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಬೀರೂರು ಖಾಸಾ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಂ.ಲೋಕೇಶ್, ತಾಲೂಕು ಘಟಕ ಅಧ್ಯಕ್ಷ ಶಿವಶಂಕರ್, ಬಾಬಣ್ಣ, ವಿಶ್ವಾರಾಧ್ಯ ಟ್ರಸ್ಟ್ ಅಧ್ಯಕ್ಷ ಮರುಳಸಿದ್ದಾರಾಧ್ಯ, ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ಶಿವಾನಂದಾಶ್ರಮ ಟ್ರಸ್ಟ್ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts