More

    ಮತಾಂತರದ ವಿರುದ್ಧ ಮಠಾಧೀಶರೇ ಮಹಾಪಂಚಾಯತ್ ಕರೆಯಲಿ

    ಚಿತ್ರದುರ್ಗ: ಬಲವಂತದ ಮತಾಂತರ ನಿಯಂತ್ರಿಸಲು ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ರಾಜ್ಯ ಸ ರ್ಕಾರದ ವಿರುದ್ಧ ಮಠಾಧೀಪತಿಗಳೇ ಮಹಾಪಂಚಾಯತ್ ಕರೆಯಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‌್ಯದರ್ಶಿ ಸಿ ಟಿ.ರವಿ ಅಭಿ ಪ್ರಾಯಪಟ್ಟರು.

    ಈಚೆಗೆ ನಿಧನ ಹೊಂದಿದ ಬಿಜೆಪಿ ಮುಖಂಡ ಸಿದ್ದೇಶ್‌ಯಾದವ್ ಅವರ ನಗರದ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಅವರ ಕುಟುಂ ಬ ವರ್ಗಕ್ಕೆ ಸ್ವಾಂತನ ಹೇಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರವಿ ಅವರು,ಮತಾಂತರವೆಂಬುದು ಗೆದ್ದಲು ಹುಳುವಿನಂತೆ ಹಿಂ ದು ಸಮಾಜವನ್ನು ದುರ್ಬಲಗೊಳಿಸುತ್ತಿದೆ.
    ಇದಕ್ಕೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಕುಟುಂಬವೇ ಸಾಕ್ಷಿ.

    ಕಾಂಗ್ರೆಸ್ ಮೋಸದ ಮತಾಂತರವನ್ನು ಒಪ್ಪುತ್ತದೆಯೇ?ಬಲವಂತ ದಿಂದಾಗುವ ಮತಾಂತರ ವಿರುದ್ಧ ಬಿಜೆಪಿ ಪ್ರತಿಕ್ರಿಯಿಸುವುದು ಒಂದೆಡೆಯಾದರೆ, ಎಲ್ಲ,ಜಾತಿ,ಸಮುದಾಯದಗಳ ಮುಖಂಡರು ಹಾ ಗೂ ಮಠಾಧೀಶರು ಈ ಕುರಿತು ಯೋಚಿಸ ಬೇಕಿದೆ. ಭಕ್ತರೇ ಇಲ್ಲ ಎಂದಾದ ಮೇಲೆ ಮಠಗಳಿಗೆ ಯಾರೂ ಹೋಗುತ್ತಾರೆ. ಆದ್ದರಿಂದ ಬಲವಂತದ,ಆಮಿಷದ ಮತಾಂತರ ವಿರುದ್ಧ ಮಠಾಧೀಶರು ಮಹಾಪಂಚಾಯತ್ ಕರೆಯಬೇಕಾಗುತ್ತದೆ ಎಂದರು.

    ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಸುಪ್ರೀಂಕೋರ್ಟ್ ಐದು ಬಾರಿ ಸರ್ಕಾರಕ್ಕೆ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ವಿವಾಹ, ವಿಚ್ಛೇ ದನ ಹಾಗೂ ಉತ್ತ ರಾಧಿಕಾರಿತ್ವದ ವಿಷಯಗಳು ಎಲ್ಲರಿಗೂ ಸಮಾನವಾಗಿರಬೇಕು. ಬಿಜೆಪಿ ಒಡೆದಾಳುತ್ತಿದೆ ಎಂದು ಆರೋಪಿಸುವ ನೀ ವು ಯಾಕೆ ಏಕರೂಪ ನೀತಿ ಸಂಹಿತೆ ವಿರೋಧಿಸುತ್ತಿದ್ದೀರೆಂದು ಕಾಂಗ್ರೆಸ್,ಕಮ್ಯೂನಿಷ್ಟ್ ಪಕ್ಷದವರನ್ನು ಪ್ರಶ್ನಿಸಿದರು.

    ರಾಜ್ಯದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಯಾಕೆ ಈವರೆಗೆ ಆಗಿಲ್ಲ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ. ಕೆಲವು ಸಂಗತಿಗಳನ್ನು ಹೇಳಲು ಆಗುವುದಿಲ್ಲವೆಂದು ರವಿ ಸಹಾಯಕತೆ ವ್ಯಕ್ತಪಡಿಸಿದರು. ಈಚೆಗೆ ವೀಕ್ಷಕರು ರಾಜ್ಯಕ್ಕೆ ಬಂದು ಹೋಗಿದ್ದಾರೆ. ನಾನು ಗೋವಾ, ಮಹಾ ರಾಷ್ಟ್ರ ಹಾಗೂ ತಮಿಳುನಾಡಿನ ಉಸ್ತುವಾರಿ ಹೊತ್ತಿದ್ದೇನೆ. ಕರ್ನಾಟಕದ ವಿದ್ಯಮಾನಗಳ ಕುರಿತು ಸಲಹೆ ಕೇಳಿದರೆ ಕೊಡಬಲ್ಲೆ. ನಾನಾಗಿ ಮೇಲೆ ಬಿದ್ದು ಸಲಹೆ ಕೊಡುವುದಿಲ್ಲ.

    ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಅಧಿಕಾರದ ಹುದ್ದೆ ಅಲ್ಲ,ಅದೊಂದು ಜವಾಬ್ದಾರಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸ ಬೇಕಿದೆ. ಅಧ್ಯಕ್ಷರಾಗುವ ಅರ್ಹತೆ ಉಳ್ಳವರು ನಮ್ಮಲ್ಲಿ ಅನೇಕರಿದ್ದಾರೆ. ನಾನು ಯಾವ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಕಾಂಗ್ರೆಸ್ ಸರ್ಕಾರ ಗೊಂದಲಗಳಿಂದ ಆರಂಭವಾಗಿದೆ.

    ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಮತ್ತೊಂದು ರಾಜಕೀಯ ಪಕ್ಷವಾಗಿ ಜೆಡಿಎಸ್ ಕೂಡ ಹೋರಾಟ ನಡೆಸುತ್ತಿದೆ. ಸಾಮಾನ್ಯ ವಿಷಯಗಳನ್ನಾಧರಿಸುವ ಹೋರಾಟಕ್ಕೆ ಹೊಂದಾಣಿಕೆ ಅಂ ದರೆ ಹೇಗೆ?ರಾಜ್ಯವಿಧಾನಸಭಾ ಚುನಾವಣೆ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸೈಡ್‌ಲೈನ್ ಮಾಡಿದ್ದರಿಂದಾಗಿ ಬಿಜೆಪಿ ಸೋಲಿಗೆ ಕಾರಣವಾಯಿತೆಂಬ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ‌್ಯ ಅವರ ಹೇಳಿಕೆಗೆ,ರವಿ ಅವರವರ ಭಾವಕ್ಕೆ ಅವರ ಭಕುತಿ…. ಎಂದರು.

    ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂಬ ಸಿದ್ದೇಶ್‌ಯಾದವ್ ಹೋರಾಟವನ್ನು ರವಿ ಸ್ಮರಿಸಿದರು. ಸಿದ್ದೇಶ್ ಯಾದವ್ ಅವರ ಪತ್ನಿ ಶಿವರುದ್ರಮ್ಮ, ಪುತ್ರರಾದ ಪ್ರಜ್ವಲ್,ಋಷಿಕೇಶ್,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಜಿ.ಎಂ.ಸುರೇಶ್, ಹನುಮಂತೇಗೌಡ, ಸಂಪತ್‌ ಕುಮಾರ್,ಜಯಪಾಲಯ್ಯ,ಸುರೇಶ್ ಸಿದ್ದಾಪುರ, ಶಿವಣ್ಣಾಚಾರ್,ಕಲ್ಲೇಶಯ್ಯ, ಚಂದ್ರು,ಯುವರಾಜ್, ಮಂಜುನಾಥ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts