More

    ಮತದಾನದ ಮಮತೆಯ ಕರೊಯೊಲೆ


    ಯಾದಗಿರಿ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾರರನ್ನು ಆಕಷರ್ಿಸಲು ಜಿಲ್ಲಾಡಳಿತ ಮತದಾನದ ಮಮತೆಯ ಕರೆಯೋಲೆ ಶೀಷರ್ಿಕೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡುವುದರ ಮೂಲಕ ವಿನೂತನ ಪ್ರಯೋಗ ಮಾಡಿದೆ.
    ಪ್ರಸಕ್ತ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಡಳಿತ ನಿತ್ಯ ಒಂದಿಲ್ಲೊಂದು ಮತದಾನ ಜಾಗೃತಿಗಾಗಿ ವಿನೂತನ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಮತದಾರರಿಗೆ ಮದುವೆಯ ಆಮಂತ್ರಣದ ರೂಪದಲ್ಲಿ ಆಹ್ವಾನ ಕೊಟ್ಟಿದೆ.ಪತ್ರಿಕೆಯ ಮುಖಪುಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಸ್ವಿಪ್ ಸಮಿತಿಯು ಮತದಾರರ ಮಮತೆಯ ಕರೆಯೋಲೆ ಎಂಬ ಶೀಷರ್ಿಕೆ ಇಡಲಾಗಿದೆ.
    ಭಾರತ ಚುನಾವಣಾ ಆಯೋಗ ನಿಶ್ಚಯಿಸಿದಂತೆ ಕನರ್ಾಟಕ ವಿಧಾನಸಭಾ ಚುನಾವಣೆ-2023 ರ ಮತದಾನ ದಿನ ಸಲ್ಲುವ ಶುಭ ಮಹೂರ್ತದಲ್ಲಿ ಭಾರತ ಮಾತೆಯ ಪ್ರಭುದ್ದ ಪ್ರಜೆಯಾದ ಮತದಾರ ಜತೆ ಪ್ರಜಾಪ್ರಭುತ್ವ. ಈ ಮಹತ್ವದ ಶುಭ ಕಾರ್ಯದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿದು ಜನರಿಂದ ಜನರಿಗೋಸ್ಕರ ಸಂವಿಧಾನಬದ್ದ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ವಿನಂತಿ ಎಂದು ಬರೆಯವಾಗಿದೆ.
    ಇದರಲ್ಲಿ ಮತದಾನದ ದಿನ ಮೇ.10, ಮುಹೂರ್ತ ಬೆಳಗ್ಗೆ 7 ರಿಂದ ಸಂಜೆ 6 ಗಂಟೆ, ಮತದಾನ ಕೇಂದ್ರದ ಸ್ಥಳ ನಿಮ್ಮ ವಾಡರ್್, ನಿಮ್ಮ ಗ್ರಾಮದ ಮತಗಟ್ಟೆ. ನಿಮ್ಮ ಮತ ಅಮೂಲ್ಯ ಕಟ್ಟಲಾರೆವು ಇದರ ಮೌಲ್ಯ. ಮತಗಟ್ಟೆಗೆ ಹೋಗಿ ಮತ ಚಲಾಯಿಸಿ. ಹಿರಿಯರು, ಕಿರಿಯರು, ಯುವಜನ ಎಲ್ಲರೂ ಮಾಡಲಿ ಮತದಾನ ಎಂದು ಸಹ ನಮೂದಿಸಲಾಗಿದೆ.
    ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ. ಎಂದು ಈ ಬಾರಿಯ ಚುನಾವಣೆಯ ಘೋಷವಾಕ್ಯ ನೀಡಿದ್ದು, ವಿಶೇಷ ಸೂಚನೆಯಲ್ಲಿ ಹಣ, ಹೆಂಡ, ಇತರೆ ದುಶ್ಚಟಗಳ ಆಮಿಷಕ್ಕೆ ಒಳಗಾಗದೇ ನೈತಿಕ ಮತದಾನ ಮಾಡಿದರೆ ಅದೇ ನಿಮ್ಮ ಉಡುಗೊರೆ, ಆಶೀವರ್ಾದ ಎಂದು ಹಾಕಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts