More

    ಮಠಗಳು ಆಧ್ಯಾತ್ಮಿಕತೆಗೆ ಒತ್ತು ನೀಡಬೇಕು

    ಹಾನಗಲ್ಲ: ಮಠದಲ್ಲಿ ಸ್ವಾಮಿಯಾದವರು ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ. ಆಧ್ಯಾತ್ಮಿಕ ವಿಕಾಸಕ್ಕೆ ಒತ್ತು ನೀಡುವ ಬಸವಾದಿ ಶರಣರ ಧರ್ಮ, ನೀತಿ ಮನೆಮಾತಾಗಬೇಕು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಲಿಂ.ಕುಮಾರ ಶಿವಯೋಗಿಗಳ 90ನೇ ಪುಣ್ಯ ಸ್ಮರಣೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಮರೆಯಾಗುತ್ತಿರುವ ಧರ್ಮ-ಸಂಸ್ಕಾರಗಳ ಪುನರುತ್ಥಾನವಾಗಬೇಕಿದೆ. ಲಿಂಗ, ವಿಭೂತಿ ಧಾರಣೆ ಅಪರೂಪವಾಗುತ್ತಿದೆ. ಲಿಂಗ ಸಂಸ್ಕಾರ ನೀಡಬೇಕಾದ ಮಠಗಳು ಕಾಲೇಜ್​ಗಳನ್ನು ತೆರೆದು ಹಣ ಸಂಪಾದಿಸುವ ಮೂಲಗಳಾಗುತ್ತಿವೆ. ಆಧ್ಯಾತ್ಮಿಕ ವಿಕಾಸಕ್ಕೆ ಮುಂದಾಗುತ್ತಿಲ್ಲ. ಲಿಂ.ಕುಮಾರ ಶಿವಯೋಗಿಗಳು ಶಿವಯೋಗ ಸಿದ್ಧರಾಗಿದ್ದರು. ಮಠಗಳ ಅಸ್ತಿತ್ವ ಧರ್ಮ ಸಂಸ್ಕಾರದಲ್ಲಿದೆ ಎಂಬುದನ್ನು ಅರುಹಿದ್ದರು ಎಂದರು.

    ನೇತೃತ್ವ ವಹಿಸಿದ್ದ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮಿಗಳು ಮಾತನಾಡಿ, ಸಾಧಕರ ಉಸಿರಾಗಿದ್ದ ಹಾನಗಲ್ಲ ಲಿಂ.ಗುರುಕುಮಾರ ಶಿವಯೋಗಿಗಳು ಪ್ರಚಾರ ಬಯಸದ ವ್ರತಧಾರಿಗಳಾಗಿ, ಸದಾ ನೊಂದು-ಬೆಂದವರ ಕಷ್ಟಗಳಿಗೆ ನೆರವಾಗಿ ಮಠವನ್ನು ತ್ಯಾಗದ ಮಠವನ್ನಾಗಿಸಿದರು. ಶ್ರಮವಿಲ್ಲದೆ ಎಲ್ಲವನ್ನೂ ಬಯಸುವ ಈ ಕಾಲದಲ್ಲಿ ಈಗಲಾಗದರೂ ಬದಲಾವಣೆ ಬೇಕಾಗಿದೆ. ಶ್ರಮ ಜೀವನದಕ್ಕೆ ಗೌರವ ಸಲ್ಲಬೇಕಾಗಿದೆ ಎಂದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು.

    ಶಾಸಕ ಸಿ.ಎಂ. ಉದಾಸಿ ಅಧ್ಯಕ್ಷತೆ ವಹಿಸಿದ್ದರು. ಬಿಜಕಲ್ ಶಿವಲಿಂಗ ಸ್ವಾಮಿಗಳು, ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು, ಕೂಡಲದ ಗುರುಮಹೇಶ್ಚರ ಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಮಹಾಸ್ವಾಮಿಗಳು, ಮೂಲೆಗದ್ದೆ ಚನ್ನಬಸವಸ್ವಾಮಿಗಳು, ಅರಳೀಕಟ್ಟಿ ಶಿವಮೂರ್ತಿ ಶ್ರೀಗಳು, ಗೋಡಗೆರೆ ಶಿವಾನಂದ ದೇವರು, ಹಾವೇರಿ ಸಿದ್ಧಲಿಂಗ ದೇವರು ಪಾಲ್ಗೊಂಡಿದ್ದರು.

    ಸಾಧಕರಿಗೆ ಸನ್ಮಾನ: ತಾಲೂಕಿನವರೇ ಆದ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡಿವೈಎಸ್​ಪಿ ಹುದ್ದೆಗೆ ಆಯ್ಕೆಯಾಗಿರುವ ತಹಸೀಲ್ದಾರ್ ಚಂದ್ರಶೇಖರ ಗಾಳಿ, ತಹಸೀಲ್ದಾರ್ ಆಗಿ ನೇಮಕವಾಗಿರುವ ಮಲ್ಲೇಶ ಪೂಜಾರ, ಸಹಾಯಕ ಆಯುಕ್ತರಾಗಿ ಆಯ್ಕೆಯಾದ ಪಲ್ಲವಿ ಸಾತೇನಹಳ್ಳಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts