More

    ಮಕ್ಕಳ ಆಸಕ್ತಿಗನುಗುಣ ಶಿಕ್ಷಣ ನೀಡಿ

    ಚಾಮರಾಜನಗರ: ಶಿಕ್ಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಸುಗಮವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಹೇಳಿದರು.

    ನಗರದ ರಾಮಸಮುದ್ರದ ಬಾಲಕರ ಶಾಲೆಯಲ್ಲಿ  ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಾಕ್ಷರತಾ ಇಲಾಖೆೆಯ ಸಹಯೋಗದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ 222 ಪ್ರೌಢಶಾಲೆಗಳಿವೆ. ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದ ತರಗತಿಗಳಲ್ಲಿ ತಿಳಿಯುವ ವಿಷಯಗಳು ಬಹಳಷ್ಟು ಇರುತ್ತದೆ. ಕಲೆ, ಸಂಸ್ಕೃತಿ, ಕರಕುಶಲ ವಸ್ತುಗಳನ್ನು ತಯಾರಿಸುವ ಪದ್ಧತಿ ಸೇರಿದಂತೆ ಇತರ ವೃತ್ತಿಯ ಬಗ್ಗೆ ಶಿಕ್ಷಣದಲ್ಲಿ ತಿಳಿಯಬಹುದು ಎಂದರು.

    ಶಾಲೆಯ ಮುಖ್ಯ ಶಿಕ್ಷಕ ಸುಜಯ್ ಕುಮಾರ್ ಮಾತನಾಡಿ, ಮಕ್ಕಳ ಭವಿಷ್ಯ ಅವರು ಕಲಿಯುವ ಶಿಕ್ಷಣದಲ್ಲಿದೆ. ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಶಾಲೆಯಲ್ಲಿ ಅಥವಾ ಮನೆಯಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡುವುದರಿಂದ ಜ್ಞಾನದ ಅರಿವು ಮೂಡಲಿದೆ ಎಂದರು.

    ಇದೇ ವೇಳೆ ವಿದ್ಯಾರ್ಥಿಗಳು ತಾವೇ ಬೆಳೆದ ತರಕಾರಿ, ಸೊಪ್ಪು ಸೇರಿದಂತೆ ಇತರ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವೃತ್ತಿ ಶಿಕ್ಷಣ ಸಂಘದ ಅಧ್ಯಕ್ಷ ಶಿವಯ್ಯ, ಕಾರ್ಯದರ್ಶಿ ಗೊಪಾಲಯ್ಯ, ವಿಷಯ ಪರಿವೀಕ್ಷಕ ಕೃಷ್ಣಪ್ರಸಾದ್, ಜಿಲ್ಲಾ ಸಮನ್ವಯ ಅಧಿಕಾರಿ ಲಕ್ಷ್ಮೀಪತಿ,  ಶಂಕರ್, ಪುಷ್ಪರಾಜ್ ಹಾಗೂ ಶಿಕ್ಷಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts