More

    ಮಕ್ಕಳಿಗೆ ಸಿರಿಧಾನ್ಯ ವಿತರಿಸಲು ಎಐಡಿಎಸ್ಒ ಆಗ್ರಹ

    ದಾವಣಗೆರೆ: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ ರಾಗಿ-ಜೋಳ ಒದಗಿಸಲು ನಿರಾಕರಿಸಿರುವ ಕೇಂದ್ರ ಸರ್ಕಾರದ
    ನಡೆಗೆ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯ ಒದಗಿಸುವ ಕೇಂದ್ರ ಸರ್ಕಾರದ ಯೋಜನೆ ಮೇರೆಗೆ ರಾಜ್ಯ ಸರ್ಕಾರ ರಾಗಿ ಮತ್ತು ಜೋಳದ ಆಹಾರ ಒದಗಿಸಲು ನಿರ್ಧರಿಸಿತ್ತು. ಆದರೆ, ಕೇಂದ್ರ ಸರ್ಕಾರದ ಅಧೀನದ ಆಹಾರ ಸರಬರಾಜು ನಿಗಮವು ಪ್ರಸ್ತಾವನೆಯನ್ನು ತಿರಸ್ಕರಿಸಿ ಅಕ್ಕಿ ಪೂರೈಕೆಯನ್ನೇ ಮುಂದುವರಿಸುತ್ತಿದೆ. ಈಗಾಗಲೇ ದೇಶವ್ಯಾಪಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿವೆ ಮತ್ತು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು 107ನೇ ಸ್ಥಾನದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಸಿರಿಧಾನ್ಯಗಳ ಪೂರೈಕೆ ಮಕ್ಕಳ ಪೌಷ್ಟಿಕತೆ ವೃದ್ಧಿಗೆ ಸಹಕಾರಿಯಾಗಲಿದ್ದು ಪ್ರಾದೇಶಿಕ ಆಹಾರ ಪದ್ಧತಿ ಮಕ್ಕಳ ಬೆಳವಣಿಗೆಗೆ ಪೂರಕವಾಗಲಿದೆ.
    ಲಕ್ಷಾಂತರ ಮಕ್ಕಳು ತಮ್ಮ ದೈನಂದಿನ ಪೌಷ್ಟಿಕಾಂಶಕ್ಕಾಗಿ ಬಿಸಿಯೂಟ ಅವಲಂಬಿಸಿದ್ದಾರೆ. ಇಂತಹ ಗಂಭೀರ ವಿಷಯದಲ್ಲಿ
    ಕೇಂದ್ರ ಸರ್ಕಾರ ಯಾವುದೇ ರೀತಿಯ ರಾಜಕೀಯಕ್ಕೆ ಅವಕಾಶ ನೀಡದೆ ಅವಶ್ಯಕತೆಗೆ ತಕ್ಕಂತೆ ಧಾನ್ಯ ಪೂರೈಸಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts