More

    ಭ್ರಷ್ಟಾಚಾರ ಮುಚ್ಚಿ ಹಾಕಲು ಜಾತಿ ಕಂಬಳಿ ಹೊದಿಸಬೇಡಿ

    ಬಾಗಲಕೋಟೆ: ಕಾಂಗ್ರೆಸ್ ಲಿಂಗಾಯತ, ಬ್ರಾಹ್ಮಣ ಸೇರಿದಂತ ಯಾವುದೇ ಜಾತಿ, ಧರ್ಮದ ವಿರೋಧಿಯಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೇಲೆ ಬಂದಿರುವ ಶೇ.40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಮುಚ್ಚಿ ಹಾಕಲು ಜಾತಿ ಕಂಬಳಿ ಅಥವಾ ಕೌದಿ ಹೊದಿಸಲು ಮುಂದಾಗಿರುವುದು ಎಂದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಸ್.ಜಿ.ನಂಜಯ್ಯನಮಠ ಬಿಜೆಪಿ ವಿರುದ್ಧ ಗುಡುಗಿದರು.
    ಆರೋಗ್ಯ ಸಚಿವ ಸುಧಾಕರ ಇತಿಹಾಸ ಅರಿತು ಮಾತನಾಡಬೇಕು. ಸುಖಾಸುಮ್ಮನೇ ಕಾಂಗ್ರೆಸ್ ಮೇಲೆ ಗುಬಿ ಕೂರಿಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷವು ಯಾವುದೇ ಜಾತಿ, ಜನಾಂಗಕ್ಕೆ ಅನ್ಯಾಯ ಮಾಡಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ವಿಷಯಕ್ಕೆ ಆರೋಪ ಮಾಡಿರುವುದು ಗುತ್ತಿಗೆದಾರರ ಸಂಘ. ಪ್ರಧಾನ ಮಂತ್ರಿಗೆ ಪತ್ರ ಬರೆಯಿತು. ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವಂತೆ ಕಾಂಗ್ರೆಸ್ ಧ್ವನಿ ಎತ್ತಿದೆ. ಇದಕ್ಕೆ ಉತ್ತರಿಸುವ ಬದಲು ಜಾತಿ ಅಸ್ತ್ರ ಪ್ರಯೋಗಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಕಾಂಗ್ರೆಸ್ ಲಿಂಗಾಯತರು ಸೇರಿದಂತೆ ಎಲ್ಲರಿಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸ್ಥಾನ ಮಾನ ನೀಡಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆಂಧ್ರಪ್ರದೇಶದ ಪಿ.ವಿ.ನರಸಿಂಹರಾವ ಎಐಸಿಸಿ ಅಧ್ಯಕ್ಷ, ಕೇಂದ್ರದಲ್ಲಿ ಮಂತ್ರಿ, ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ್ದರು. ರಾಜ್ಯದಲ್ಲಿ ಗುಂಡುರಾವ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಲಿಂಗಾಯತ ಸಮುದಾಯಕ್ಕೆ ಸೇರಿದ ಎಸ್.ನಿಜಲಿಂಗಪ್ಪ ಅವರನ್ನು 4 ಬಾರಿ ಮುಖ್ಯಮಂತ್ರಿಯಾಗಿ ಮಾಡಲಾಗಿತ್ತು. ಇಂದಿರಾ ಗಾಂಧಿ ವಿರುದ್ಧ ಸ್ಪರ್ಧೆ ಮಾಡಿದ್ದರು ಆಡಳಿತ ಅನುಭವಿ ಎನ್ನುವ ಕಾರಣಕ್ಕೆ ವೀರೇಂದ್ರ ಪಾಟೀಲ ಎರಡು ಬಾರಿ ಮುಖ್ಯಮಂತ್ರಿ ಮಾಡಲಾಗಿತ್ತಯ. ಪಾರ್ಶ್ವವಾಯುಗೆ ತುತ್ತಾದಾಗ ಅನಿವಾರ್ಯ ಕಾರಣಗಳಿಂದಾಗಿ ಬದಲಾವಣೆ ಮಾಡಲಾಯಿತು. ಎಸ್.ಆರ್.ಕಂಠಿ ಅವರಿಗೂ ಅವಕಾಶ ನೀಡಲಾಗಿತ್ತು. ಬಿ.ಡಿ.ಜತ್ತಿ ಮುಖ್ಯಮಂತ್ರಿ, ಉಪ ರಾಷ್ಟ್ರಪತಿ, ಹಂಗಾಮಿ ರಾಷ್ಟ್ರಪತಿ ಹಾಗೂ ಓರಿಸ್ಸಾ ರಾಜ್ಯಪಾಲರಾಗಿದ್ದರು. ಒಕ್ಕೂಲಿಗ ಸಮುದಾಯ ಎಸ್.ಎಂ.ಕೃಷ್ಣಾ ಎಂಎಲ್ಎ, ಎಂಎಲ್ಸಿ, ಎಂ.ಪಿ, ರಾಜ್ಯಸಭೆ, ಲೋಕಸಭೆ, ಮುಖ್ಯಮಂತ್ರಿ, ಕೇಂದ್ರದಲ್ಲಿ ವಿದೇಶಾಂಗ ಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮಾಡಲಾಗಿತ್ತು. ಆದರು ಅವರು ಪಕ್ಷಕ್ಕೆ ದ್ರೋಹ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
    ರಾಜ್ಯದಲ್ಲಿ ಜನತಾ ಪಾರ್ಟಿ ಅಧಿಕಾರದಲ್ಲಿ ಇದ್ದಾಗ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜಿ.ಎಚ್.ಪಟೇಲ, ದೇವೇಗೌಡ ಮುಖ್ಯಮಂತ್ರಿಯಾಗಿದ್ದರು. ಹಿಂದುಳಿದ ವರ್ಗ ಸಿದ್ದರಾಮಯ್ಯ ಅವರಿಗೆ ಅವಕಾಶ ತಪ್ಪಿಸಿ ದೇವೇಗೌಡರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಿದರು. ಆದರೇ ಕಾಂಗ್ರೆಸ್ನಲ್ಲಿ ದೇವರಾಜ ಅರಸು, ಧರ್ಮಸಿಂಗ್, ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಅಂತಹ ಹಿಂದುಳಿದ ನಾಯಕರಿಗೆ ಸಮರ್ಥ ವ್ಯಕ್ತಿಗೆ ಅಧಿಕಾರ ಕಲ್ಪಿಸಿದೆ. ಕೆಂಗಲ್ ಹನುಮಂತಯ್ಯ, ಕಡಿದಾಳು ಮಂಜಪ್ಪ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್ ಎಂದಿಗೂ ಲಿಂಗಾಯತ ಸೇರಿದಂತೆ ಯಾವುದೇ ಸಮುದಾಯದ ವಿರೋಯಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅವಕಾಶ ನೀಡಿದೆ. ಭ್ರಷ್ಟಾಚಾರದ ಪ್ರಶ್ನೆ ಮಾಡಿದಕ್ಕೆ ಕಾಂಗ್ರೆಸ್ ಮೇಲೆ ಜಾತಿ ಅಸ್ತ್ರ ಪ್ರಯೋಗಿಸುವುದು ಹೇಡಿತನದ ಕೆಲಸ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ದೇಶ ದ್ರೋಹಿಗಳಿಗೆ ಬೆಂಬಲ ನೀಡಲ್ಲ
    ದೇಶದಲ್ಲಿ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರು, ಮುಖಂಡರು, ಸಂಘಟನೆ ಮೇಲೆ ನಿಷೇಧ ಮಾಡಮಾಗಿದೆ. ಯಾರೇ ದೇಶದ್ರೋಹ ಕೆಲಸ ಮಾಡಿದರೇ ಕ್ರಮ ತೆಗೆದುಕೊಳ್ಳುವಲ್ಲಿ ನಾವು ವಿರೋಧ ಮಾಡಲ್ಲ. ದೇಶದ್ರೋಹಿಗಳಿಗೆ ಬೆಂಬಲ ನೀಡಲ್ಲ. ಆದರೇ ದುರುದ್ದೇಶದಿಂದ ಕೂಡಿರಬಾರದು. ಮೊದಲು ದೇಶ, ನಂತರ ರಾಜಕಾರಣ, ಆಮೇಲ ನಾನು ಎನ್ನುವುದು ನಮ್ಮ ಸಿದ್ಧಾಂತ ಎಂದು ಎಸ್.ಜಿ.ನಂಜಯ್ಯನಮಠ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
    ಇನ್ನು ಕೆರೂರಿನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಸಿದ್ದರಾಮಯ್ಯ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆ ಎನ್ನುವ ಹೇಳಿಕೆ ಖಂಡನೀಯ. ಈಚೆಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ ಭಾಗವಾತ ದೆಹಲಿಯಲ್ಲಿ ಮಸೀದಿಗೆ ಭೇಟಿ ನೀಡಿ ನಮ್ಮೆಲ್ಲರ ಡಿಎನ್ಎ ಟೆಸ್ಟ್ ಮಾಡಿದರೇ ಎಲ್ಲರದು ಒಂದೇ ರಕ್ತ ಇದೇ ಅಂತ ಹೇಳಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಹೇಳಿಕೆ ನೀಡಬೇಕು ಎಂದು ಹೇಳಿದರು.

    ಮುಖಂಡರಾದ ನಾಗರಾಜ ಹದ್ಲಿ, ರಕ್ಷಿತಾ ಭರತಕುಮಾರ ಈಟಿ, ನಾಗರಾಜ ಹದ್ಲಿ, ಆನಂದ ಶಿಲ್ಪಿ, ಸಿಕಂದರ ಅಥಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts