More

    ಭೀಮಾತೀರದಲ್ಲಿ ಅಕ್ರಮ ಚಟುವಟಿಕೆ, ಸರ್ಕಾರದ ಗಮನ ಸೆಳೆದ ಶಾಸಕದ್ವಯರು, ಸರ್ಕಾರ ಕೊಟ್ಟ ಉತ್ತರವೇನು ಗೊತ್ತಾ?

    ವಿಜಯಪುರ: ಭೀಮಾತೀರದಲ್ಲಿ ಆಗಾಗ ಸದ್ದು ಮಾಡುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಡಾ.ದೇವಾನಂದ ಚವಾಣ್ ಸರ್ಕಾರದ ಗಮನ ಸೆಳೆದಿದ್ದಾರೆ.
    ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿರುವ ಅವರು, ಇಂಡಿ ಹಾಗೂ ಚಡಚಣ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚುವಟಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯಾ? ಈವರೆಗೆ ಎಷ್ಟು ಪ್ರಕರಣಗಳು ದಾಖಲಾಗಿವೆ? ಕೈಗೊಂಡ ಕ್ರಮಗಳೇನು? ಎಂಬಿತ್ಯಾದಿ ವಿವರ ಕೇಳಿದ್ದಾರೆ.
    ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ನಾಗಠಾಣ ಕ್ಷೇತ್ರ ವ್ಯಾಪ್ತಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. 2018 ರಿಂದ 202ರವರೆಗೆ 72 ಅಕ್ರಮ ಮದ್ಯ ಮಾರಾಟ ಪ್ರಕರಣಗಳು, 9 ಆಯುಧ ಪ್ರಕರಣಗಳು ಹಾಗೂ 9 ಕೊಟ್ಪಾ ಪ್ರಕರಣಗಳು ಸೇರಿ ಒಟ್ಟು 135 ಪ್ರಕರಣಗಳು ದಾಖಲಾಗಿವೆ. ಇನ್ನು ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ಬಂದಿಲ್ಲ. ರಸ್ತೆ ಅಪಘಾತ, ಮಾನವ ಕಳ್ಳಸಾಗಣೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
    ಇನ್ನು ಇಂಡಿ ಭಾಗದ ಹೋಟೆಲ್, ಡಾಭಾಗಳ್ಳಲಿ ಗಾಂಜಾ, ಅಫೀಮ್ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ಸರ್ಕಾದ ಗಮನಕ್ಕೆ ಬಂದಿಲ್ಲವೆಂದು ಗೃಹ ಸಚಿವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts