More

    ಭಾರಿ ವರ್ಷಧಾರೆಗೆ ತಂಪಾದ ಇಳೆ

    ಲಕ್ಷೆ್ಮೕಶ್ವರ: ಸೋಮವಾರ ತಾಲೂಕಿನಾದ್ಯಂತ ಸುರಿದ ಹದವರ್ತಿ ಮಳೆ ರೈತ ಸಮುದಾಯದಲ್ಲಿ ಹರ್ಷ ತಂದಿದೆ.

    ಮುಂಗಾರಿನಲ್ಲಿ ದೊಡ್ಡ ಮಳೆಯಾಗದೆ ಜಮೀನಿನ ತಗ್ಗುಗಳಲ್ಲಿ, ಕೆರೆ ಬದುವುಗಳು ಒಣಗಿಹೋಗಿದ್ದವು. ಬೆಳೆಗಳಿಗೆ ಗೊಬ್ಬರ ಹಾಕಿದ ನಂತರ ಮಳೆ ಆಗದಿರುವುದು ರೈತರಲ್ಲಿ ಬೇಸರ ಮೂಡಿಸಿತ್ತು. ಭಾನುವಾರವಷ್ಟೇ ಕೂಡಿದ ಹೊಸ ಪುಷ್ಯ ಮಳೆ ಸುರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. 8, 10 ದಿನಗಳಿಂದ ಸುರಿದ ಜಿಟಿಜಿಟಿ ಮಳೆಯಿಂದ ಕೆಸರು, ತ್ಯಾಜ್ಯದಿಂದ ಕೂಡಿದ್ದ ರಸ್ತೆಗಳು ತುಂಬಿ ಹರಿದವು. ಮುಂಡರಗಿ ಹಾಗೂ ಡಂಬಳ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಅರ್ಧ ಗಂಟೆ ಕಾಲ ಉತ್ತಮ ಮಳೆಯಾಗಿದೆ. ನರಗುಂದ ಹಾಗೂ ವಿವಿಧೆಡೆ ಜಿಟಜಿಟಿ ಮಳೆಯಾಗಿದೆ.

    ಸಿಡಿಲು ಬಡಿದು ಯುವಕ ಸಾವು

    ರೋಣ: ಸಿಡಿಲು ಬಡಿದು ಯುವಕ ಮೃತಪಟ್ಟ ಘಟನೆ ತಾಲೂಕಿನ ಯಾವಗಲ್ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಗ್ರಾಮದ ನಿವಾಸಿ ರಾಮಕೃಷ್ಣ ಬಜಮ್ಮನವರ (30) ಮೃತಪಟ್ಟ ದುರ್ದೈವಿ. ಈತ ಗ್ರಾಮದ ಹೊರವಯದಲ್ಲಿರುವ ಜಮೀನಿನಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದನು. ಸಂಜೆ 4ಗಂಟೆಯ ಸುಮಾರಿಗೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದರಿಂದ ಸಿಡಿಲು ಬಡಿದು ಯುವಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಈ ಕುರಿತು ಮೃತನ ಸಂಬಂಧಿಕರು ಸ್ಥಳೀಯಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಮನೆಗಳಿಗೆ ನುಗ್ಗಿದ ಮಳೆ ನೀರು

    ಶಿರಹಟ್ಟಿ: ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಮಳೆಯಿಂದಾಗಿ ಪಟ್ಟಣದ ಶಿವಾಜಿ ನಗರ ತಾಂಡಾ ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ತಾಂಡಾ ಅಕ್ಕಪಕ್ಕದಲ್ಲಿ ಜಮೀನು ಇರುವುದರಿಂದ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಹೊಲಕ್ಕೆ ನೀರು ನುಗ್ಗದ್ದಂತೆ ಅಲ್ಲಲ್ಲಿ ಒಡ್ಡು ಕಟ್ಟಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರೆಲ್ಲ ಮನೆಗಳಿಗೆ ನುಗ್ಗಿದೆ. ಸಮಸ್ಯೆ ಪರಿಹರಿಸುವಂತೆ ತಾ.ಪಂ. ಇಒ ಓಲೇಕಾರ ಅವರಿಗೆ ಒತ್ತಾಯಿಸಿದರೂ ಸ್ಪಂದಿಸಿಲ್ಲ ಎಂದು ತಾಂಡಾ ನಿವಾಸಿ ಮಹಾಂತೇಶ ಲಮಾಣಿ ಅಳಲು ತೋಡಿಕೊಂಡಿದ್ದಾರೆ.

    ಜಿಲ್ಲಾ ಮುಖ್ಯರಸ್ತೆ ಹೊಂಡಮಯ

    ಮುಳಗುಂದ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜಿಲ್ಲಾ ಮುಖ್ಯರಸ್ತೆ ಹಾಳಾಗಿ ಕೆಸರುಗದ್ದೆಯಂತಾಗಿದೆ.

    ಪಟ್ಟಣದಿಂದ ಚಿಂಚಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹಲವು ದಿನಗಳಿಂದ ಹಾಳಾಗಿತ್ತು. ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಮಳೆಗಾಲಕ್ಕೆ ಅಲ್ಲಲ್ಲಿ ದೊಡ್ಡ ಗುಂಡಿಗಳು ನಿರ್ವಣವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

    ಚಿಂಚಲಿ ಕ್ರಾಸ್, ಪೊಲೀಸ್ ವಸತಿಗೃಹಗಳ ಹತ್ತಿರ ರಸ್ತೆ ಗುಂಡಿಗಳು ನೀರು ತುಂಬಿಕೊಂಡಿವೆ. ಚಿಂಚಲಿ ಗ್ರಾಮಕ್ಕೆ ಹೋಗುವ 4 ಕಿ.ಮೀ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಹೊಸ ರಸ್ತೆ ನಿರ್ವಣಕ್ಕೆ ಕಳೆದ ವರ್ಷ ಟೆಂಡರ್ ಆಗಿದ್ದು, ಜೂನ್​ನಲ್ಲಿ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಮಳೆಗಾಲಕ್ಕೂ ಮುನ್ನವೇ ರಸ್ತೆ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ.ಪಂ. ಮಾಜಿ ಸದಸ್ಯ ಮಹಾಂತೇಶ ಕಣವಿ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts