More

    ಭಾರತೀಯತೆ ಕಾರ್ಯಗತ ಮಾಡುವುದೇ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಗುರಿ

    ಶಿಡ್ಲಘಟ್ಟ: ವಿದ್ಯಾರ್ಥಿಗಳಲ್ಲಿ ‘ಭಾರತೀಯತೆ’ಯನ್ನು ಚಿಂತನೆಯಲ್ಲಷ್ಟೇ ಅಲ್ಲದೆ ಬುದ್ಧಿಶಕ್ತಿ ಮತ್ತು ಕಾರ್ಯಗಳಲ್ಲಿಯೂ ಮೂಡಿಸುವುದೇ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಉದ್ದೇಶ ಎಂದು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ನರಸಿಂಹಮೂರ್ತಿ ಹೇಳಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಕ್ಯೂಎಸಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ, ಮಾನವ ಹಕ್ಕು, ಸುಸ್ಥಿರ ಅಭಿವೃದ್ಧಿ, ಜೀವನ ಹಾಗೂ ಜಾಗತಿಕ ಕ್ಷೇಮವನ್ನು ಬೆಂಬಲಿಸುವ ಜ್ಞಾನ, ಕೌಶ, ಮೌಲ್ಯೃಗಳು ಮತ್ತು ನಿಲುವುಗಳ ಕುರಿತು ಜವಾಬ್ದಾರಿಯುತ ಬದ್ಧತೆಯನ್ನು ಪ್ರತಿಬಿಂಬಿಸುವುದೇ ಈ ನೀತಿಯ ದೃಷ್ಟಿಕೋನವಾಗಿದೆ ಎಂದರು.

    4 ವರ್ಷದ ಮಲ್ಟಿಡಿಸಿಪ್ಲಿನರಿ ಬ್ಯಾಚುಲರ್ ಪದವಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆ ನಿರ್ದಿಷ್ಟಪಡಿಸಿದಂತೆ ಪ್ರಮುಖ ಅಧ್ಯಯನ ಕ್ಷೇತ್ರಗಳಲ್ಲಿ ನಿಗದಿಪಡಿಸಲಾದ ಸೂಕ್ತ ಸಂಶೋಧನಾ ಯೋಜನೆಯನ್ನು ಪೂರ್ಣಗೊಳಿಸಿದರೆ ಸಂಶೋಧನೆಯೊಂದಿಗೆ ಪದವಿ (ಡಿಗ್ರಿ ವಿತ್ ರೀಸರ್ಚ್) ಪಡೆಯಬಹುದು ಎಂದು ವಿವರಿಸಿದರು.

    ಪದವಿಯ ಅವಧಿ 4 ಅಥವಾ 5 ವರ್ಷಗಳಿದ್ದು, ಬಹುಪ್ರವೇಶ ಅಥವಾ ಬಹುನಿರ್ಗಮನ ಆಯ್ಕೆಗಳಿವೆ. ಈ ಅವಧಿಯಲ್ಲಿ ಪ್ರಮಾಣೀಕರಣವನ್ನು ಪರಿಗಣಿಸಲಾಗುತ್ತದೆ. 5 ವರ್ಷದ ಬಹುಶಿಸ್ತೀಯ ಬ್ಯಾಚುಲರ್‌ನಲ್ಲಿ ವಿದ್ಯಾರ್ಥಿಗಳು ಸುಧಾರಿತ ಇಂಟರ್ನ್‌ಶಿಪ್ ಮತ್ತು ಸಂಶೋಧನೆಯೊಂದಿಗೆ ಪದವಿ ಪಡೆಯಲಿದ್ದಾರೆ. ತಮ್ಮ ವಿಷಯ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಗಮನಿಸುವುದು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು, ಆಧುನಿಕ ಬೋಧನೆ ವಿಧಾನಗಳನ್ನು ತೀಕ್ಷ್ಣಗೊಳಿಸುವುದು ಬಹು ಮುಖ್ಯ ಎಂದು ಪ್ರಾಂಶುಪಾಲ ಡಾ.ಜಿ.ಮುರಳಿಆನಂದ್ ತಿಳಿಸಿದರು.

    ಪ್ರಾಧ್ಯಾಪಕ ಡಾ.ಉಮೇಶ್‌ರೆಡ್ಡಿ, ಡಾ.ವೆಂಕಟೇಶ್, ಶ್ರೆಹರಿ, ಪ್ರಥಿಮಾ, ಜ್ಞಾನಜ್ಯೋತಿ ಕಾಲೇಜಿನ ಸುನಿತಾ, ಮಳ್ಳೂರು ವಿವೇಕಾನಂದ ಕಾಲೇಜಿನ ಜಯಲಕ್ಷ್ಮಿ, ಸರ್ಕಾರಿ ಐಟಿಐ ಗುರುಪ್ರಸಾದ್, ಡಾಲ್ಫಿನ್ ವಿದ್ಯಾಸಂಸ್ಥೆಯ ವಿನಯ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts