More

    ಬೌದ್ಧಿಕ ಶಕ್ತಿಗೆ ಬಲ ನೀಡಲು ಧಾರ್ಮಿಕ ಚಿಂತನೆ ಸಹಕಾರಿ

    ಸಂಕೇಶ್ವರ: ಮಾನವೀಯ ಚಿಂತನೆಗಳು ಬದುಕಿಗೆ ದೊಡ್ಡ ಮೌಲ್ಯ ತಂದುಕೊಡುವ ಶಕ್ತಿ ಹೊಂದಿದ್ದು, ಪ್ರತಿಯೊಬ್ಬರೂ ಧನಾತ್ಮಕ ಚಿಂತನೆಗಳ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

    ಸ್ಥಳೀಯ ಶಂಕರಾಚಾರ್ಯ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಶಿವಭಜನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನ ಬೌದ್ಧಿಕ ಶಕ್ತಿಗೆ ಬಲ ನೀಡುವಲ್ಲಿ ಧಾರ್ಮಿಕ ಚಿಂತನೆಗಳು ಪ್ರಮುಖ ಪಾತ್ರವಹಿಸುತ್ತವೆ. ಐತಿಹಾಸಿಕ ಪರಂಪರೆ ಹೊಂದಿರುವ ಶಂಕರಾಚಾರ್ಯ ಸಂಸ್ಥಾನ ಮಠ ಭಕ್ತರ ಕೋರಿಕೆಯನ್ನು ಈಡೇರಿಸುತ್ತದೆ ಎಂದರು.
    ಶ್ರೀಮಠದ ಪೀಠಾಧಿಪತಿ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ಧಾರ್ಮಿಕ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಮಠ-ಮಾನ್ಯಗಳಲ್ಲಿ ನಡೆಯುವ ಪೂಜೆ-ಪುನಸ್ಕಾರ, ಯಜ್ಞ-ಯಾಗಾದಿಗಳು, ಶಿವನಾಮ ಭಜನೆ, ಕೀರ್ತನೆಗಳು ಮನುಷ್ಯನ ಬದುಕಿನಲ್ಲಿ ಬದಲಾವಣೆ ತರುತ್ತವೆ ಎಂದರು.

    ಶಿವನಾಮ ಸಪ್ತಾಹ, ಭಜನಾ ಕಾರ್ಯಕ್ರಮಗಳು ಜರುಗಿದವು. ಜ.31ರಂದು ಜಾತ್ರಾ ಮಹೋತ್ಸವದ ಮಹಾಯಾತ್ರೆ ಜರುಗಲಿದ್ದು, ಜಾತ್ರೆಯ ಕಡೆ ಮಹಾಯಾತ್ರೆಗೆ ಭಕ್ತರು ಮನೆಯಲ್ಲಿ ಸಿಹಿ ತಯಾರಿಸಿ ನೈವೇದ್ಯ ಅರ್ಪಿಸಲಿದ್ದಾರೆ. ಬೆಳಗ್ಗೆ ಶ್ರೀ ಶಂಕರಾಚಾರ್ಯ ವಿದ್ಯಾಶಂಕರಭಾರತಿ (ದೇವಗೋಸಾವಿ) ಸಮಾ ಪೂಜೆ. ಸಂಜೆ ಬನಶಂಕರಿ ದೇವಸ್ಥಾನದಿಂದ ಶ್ರೀಮಠದವರೆಗೆ ರಥಯಾತ್ರೆ ಜರುಗಲಿದೆ. ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿ ಉತ್ತತ್ತಿ ಅರ್ಪಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts