More

    ಬೇಂದ್ರೆ ಕಾವ್ಯಕ್ಕಿದೆ ದುಃಖ ಹತ್ತಿಕ್ಕುವ ಸಾಮರ್ಥ್ಯ

    ಧಾರವಾಡ: ಬೇಂದ್ರೆಯವರು ತಮ್ಮ ಕಾವ್ಯಾಭಿವ್ಯಕ್ತಿಗೆ ದುಃಖ ಆಯ್ಕೆ ಮಾಡಿಕೊಂಡರೋ? ಅಥವಾ ದುಃಖವೇ ಬೇಂದ್ರೆ ಅವರನ್ನು ಆಯ್ಕೆ ಮಾಡಿಕೊಂಡಿತೋ ಎನ್ನುವಷ್ಟರ ಮಟ್ಟಿಗೆ ಅವರ ಕಾವ್ಯಗಳಲ್ಲಿ ದುಃಖ ಸಮ್ಮಿಲನಗೊಂಡಿದೆ. ದುಃಖದ ನಿರೂಪಣೆ, ವಿಶ್ಲೇಷಣೆ ಮತ್ತು ಮೌಲ್ಯಮಾಪನ ಬೇಂದ್ರೆ ಕಾವ್ಯದಲ್ಲಿ ಏಕಕಾಲದಲ್ಲೇ ನಡೆಯುತ್ತದೆ. ದುಃಖ ಮತ್ತು ಬೇಂದ್ರೆ ನಡುವಿನ ಹೋರಾಟದಲ್ಲಿ ದುಃಖ ಸೋಲುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಿಕ್ರಂ ವಿಸಾಜಿ ಅಭಿಪ್ರಾಯಪಟ್ಟರು.

    ನಗರದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಶನಿವಾರ ಆಯೋಜಿಸಿದ್ದ ‘ವಾರ ವಾರ ಬೇಂದ್ರೆ’ ವೆಬಿನಾರ್ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ‘ದ.ರಾ. ಬೇಂದ್ರೆ ಕಾವ್ಯದಲ್ಲಿ ದುಃಖ’ ಕುರಿತು ಅವರು ಮಾತನಾಡಿದರು. ಬೇಂದ್ರೆ ಕಾವ್ಯದಲ್ಲಿ ದುಃಖವೇ ಮೂಲ ಧ್ವನಿ. ಬೇಂದ್ರೆ ದುಃಖದ ವಿರುದ್ಧ ಸಾರಿದ ಬಂಡಾಯ/ಹೋರಾಟ ಅವರ ಅನೇಕ ಕವನಗಳಲ್ಲಿ ಕಾಣಸಿಗುತ್ತದೆೆ ಎಂದರು.

    ಬೇಂದ್ರೆ ವೆಬಿನಾರ್ ಕಾರ್ಯಕ್ರಮದ ಪ್ರಧಾನ ಸಂಚಾಲಕ ಪ್ರೊ. ಬಸವರಾಜ ಡೋಣೂರ ಮಾತನಾಡಿ, ಬೇಂದ್ರೆ ಅವರ ಪ್ರತಿ ಬರವಣಿಗೆ ಚಿಂತನೆಗೆ ಕೊಂಡೊಯ್ಯುವಂಥದ್ದಾಗಿದೆ. ಅಧ್ಯಯನ, ವಿಮರ್ಶೆ ಹಾಗೂ ಸಂಶೋಧನಾತ್ಮಕ ದೃಷ್ಟಿಯಿಂದ ಅನೇಕ ನೆಲೆಗಳಲ್ಲಿ ನಿಂತು ನೋಡಿದಾಗ, ಬೇಂದ್ರೆಯವರು ಪ್ರತಿ ನೆಲೆಯಲ್ಲಿ ಭಿನ್ನರಾಗಿ ಕಾಣುತ್ತಾರೆ ಎಂದರು.

    ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮಾತನಾಡಿದರು. ನಂತರ ನಡೆದ ಸಂವಾದದಲ್ಲಿ ಡಾ. ಎಚ್.ಎಸ್. ರಾಘವೇಂದ್ರರಾವ್, ಜ.ನಾ. ತೇಜಶ್ರೀ, ಡಾ. ಅಪ್ಪಗೆರೆ ಸೋಮಶೇಖರ, ಡಾ. ರಾಜಶೇಖರ ಹತಗುಂದಿ, ಡಾ. ಗೀತಾ ವಸಂತ, ಡಾ. ಮೇಟಿ ಮಲ್ಲಿಕಾರ್ಜುನ, ಡಾ. ಸಿದ್ದು ಯಾಪಲಪರವಿ, ಡಾ. ಜಯದೇವಿ ಜಂಗಮಶೆಟ್ಟಿ, ದೇವು ಪತ್ತಾರ, ಡಾ. ಗುರುನಾಥ ಬಡಿಗೇರ, ಡಾ. ಮೃತ್ಯುಂಜಯ ರುಮಾಲೆ, ಮಮ್ತಾಜ್ ಬೇಗಂ, ಡಾ. ಪ್ರಕಾಶ ಬಾಳಿಕಾಯಿ, ಸತೀಶ ಜಾಧವ, ವಿಜಯಲಕ್ಷ್ಮೀ ದಾನರೆಡ್ಡಿ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts