More

    ಬೆಳಗ್ಗೆ ಬೇಗ ಎದ್ದು ಆರೋಗ್ಯ ವೃದ್ಧಿಸಿಕೊಳ್ಳಿ

    ಕುಶಾಲನಗರ: ಬೆಳಗ್ಗೆ ಬೇಗ ಎದ್ದು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳುವಂತೆ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಸಲಹೆ ನೀಡಿದರು.

    ವೀರಶೈವ ಸಮಾಜದ ವತಿಯಿಂದ ಭಾನುವಾರ ಜಂಪ್ ಸ್ಮಾಷ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಿಂದ ಸೇವಾ, ಸಹಕಾರ ಮನೋಭಾವ ಬೆಳೆಯುತ್ತದೆ. ಒಬ್ಬರು ಸೋತಾಗ ಮಾತ್ರ ಇನ್ನೊಬ್ಬರು ಗೆಲ್ಲಲು ಸಾಧ್ಯ. ಅದನ್ನು ಅರಿತು ಕ್ರೀಡಾ ಮನೋಭಾವ ಭದ್ರಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಕ್ರೀಡಾ ಆಯೋಜಕ ಜಿತೇಂದ್ರ ಮಾತನಾಡಿ, ಮಾರ್ಚ್ 3ರಂದು ಕುಶಾಲನಗರದಲ್ಲಿ ಸಮುದಾಯದವರಿಗಾಗಿ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿಮಿತ್ತ ಈ ಕ್ರೀಡೆಯನ್ನು ಆಯೋಜಿಸಲಾಗಿದೆ. ಕ್ರೀಡೆಯಲ್ಲಿ ಜಿಲ್ಲೆಯ ಒಟ್ಟು 20 ತಂಡಗಳು ಭಾಗವಹಿಸಿವೆ. 20 ವರ್ಷ ಒಳಪಟ್ಟವರು, 20ರಿಂದ 50 ವರ್ಷದವರು ಮತ್ತು 50 ವರ್ಷ ಮೇಲ್ಪಟ್ಟವರು. ಈ 3 ವಿಭಾಗಗಳಲ್ಲಿ ಕ್ರೀಡೆ ನಡೆಸಲಾಗುತ್ತಿದೆ ಎಂದರು.

    ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಶಿವಪ್ಪ ಮಾತನಾಡಿದರು. ಸಿಪಿಐ ಬಿ.ಜಿ.ಮಹೇಶ್, ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿ ಸಾಂಬಶಿವಮೂರ್ತಿ, ಮಹಾದೇವಪ್ಪ, ಮುಳ್ಳುಸೋಗೆಯ ಹರೀಶ್, ಕುಮಾರ್, ಆನಂದ್, ಸಂತೋಷ್, ಕೂಡುಮಂಗಳೂರು ಉದಯಶಂಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts