More

    ಬೆಳಗಾವಿಯಲ್ಲಿ ರೈತರಿಂದ ಟ್ರಾೃಕ್ಟರ್ ರ‌್ಯಾಲಿ

    ಬೆಳಗಾವಿ: ಕೃಷಿ, ಎಪಿಎಂಸಿ ಕಾಯ್ದೆ ವಿರೋಧಿಸಿ ಸೋಮವಾರ ನಗರದ ಕೋಟೆ ಕೆರೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಟ್ರಾೃಕ್ಟರ್ ಮೂಲಕ ಪ್ರತಿಭಟನಾ ರ‌್ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.

    ಮಾನವ ಬಂಧುತ್ವ ವೇದಿಕೆ, ಭಾರತೀಯ ಕೃಷಿಕ ಸಮಾಜ, ರೈತ ಸಂಘಟನೆ, ಎಐಟಿಯುಸಿ, ರೈತ ಸಂಘಟನೆ, ಮಹಿಳಾ ಜಾಗೃತ ವೇದಿಕೆ, ಕೂಲಿ ನೇಕಾರ ಕಾರ್ಮಿಕ ಬಳಗ, ಎಐಯುಟಿಯುಸಿ ಟ್ರೇಡ್ ಯೂನಿಯನ್, ರೈತ ಕೃಷಿ ಸಂಘಟನೆ, ಸ್ವಾಭಿಮಾನಿ ಶೇತ್ಕರಿ ಸಂಘಟನೆ, ರಾಷ್ಟ್ರವಾದಿ ಕಾಂಗ್ರೆಸ್, ಬಸವ ಭೀಮ ಸೇನೆ ಸೇರಿದಂತೆ ನಾನಾ ಸಂಘಟನೆಗಳ ನೇತೃತ್ವದಲ್ಲಿ ರೈತರು ರ‌್ಯಾಲಿಯಲ್ಲಿ ಭಾಗಹಿಸಿದ್ದರು.

    ರೈತ ಮುಖಂಡ ಬಾಬಾಗೌಡ ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರ ಕೂಡಲೇ ರೈತರ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು. ರೈತರೊಂದಿಗೆ ಜಿದ್ದಿಗೆ ಬಿದ್ದರೆ ದೇಶಕ್ಕೆ ಅನ್ನ ನೀಡುವವರೆ ಇಲ್ಲದಂತಾಗುತ್ತದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ, ಕಾರ್ಮಿಕ, ವಿದ್ಯುತ್ ಖಾಸಗೀಕರಣ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಿದ್ದಗೌಡ ಮೋದಗಿ, ಅಪ್ಪಾಸಾಬ ದೇಸಾಯಿ, ಅಖಿಲಾ ಪಠಾಣ, ಸುಭಾಷ ದಾಯಗೊಂಡೆ, ರಾಮಚಂದ್ರ ಫಡಕೆ, ಶಿವಾಜಿ ಬುರಲಿ, ಮಹಾದೇವಿ ಮನೋಹರ ಪಾಟೀಲ್, ಬಸವ್ವ ಗುರುಪಾದ ಬೈರಿ ಇದ್ದರು. ಮನೆ ಹಂಚಿಕೆ ಮಾಡಿ: ಅರ್ಹರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಆಶ್ರಯ ಮನೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಜೈ ಭೀಮ ಓಂ ಸಾಯಿ ಸಂಘಟನೆ ನೇತೃತ್ವದಲ್ಲಿ ಲಾನುಭವಿಗಳು ನಗರದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.

    1974ರಿಂದ ಜನರು ವಂಟಮೂರಿ ಕಾಲನಿ, ರುಕ್ಮಿಣಿ ನಗರದಲ್ಲಿ ವಾಸಿಸುತ್ತಿದ್ದಾರೆ. ಆದರೆ, ವಸತಿ ಸೌಲಭ್ಯ ಸಿಕ್ಕಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜು ಟೊಂಬರೆ, ಶ್ರೀಕಾಂತ ಟಿ.ಟಿ., ಚರಣಸಿಂಗ್ ಧಮಣೆ, ಇಮ್ರಾನ್ ಜಮಾದಾರ್, ಸೋನಾಬಾಯಿ ಕದಂ, ಸುಶೀಲಾ ಮಾಳಗಿ, ನೀಲವ್ವ ರಂಗಾಪೂರಿ, ಅನಿತಾ ಧಮಣೆ, ರಂಜಿತಾ ಭೀರಸೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts