More

    ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ

    ಬಾಗಲಕೋಟೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ ಬಾಗಲಕೋಟೆ ಮತಕ್ಷೇತ್ರದ ೧೦ ಸಾವಿರ ಜನ ಮತ ಹಾಕಿದ್ದಾರೆ. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಬೆಂಬಲಿಗರು ಬೆನ್ನಲುಬಾಗಿ ನಿಂತಿದ್ದಾರೆ. ಅವರ ಅಭಿಪ್ರಾಯ ಸಂಗ್ರಹಿಸಿ ಲೋಕಸಭೆ ಚುನಾವಣೆಯಲ್ಲಿ ಮುಂದಿನ ನಡೆ ಅನುಸರಿಸಲಾಗುವುದು ಎಂದು ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ನಮಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದಿಂದ ಆಹ್ವಾನ ಬಂದಿಲ್ಲ. ನಾವು ಯಾವುದೇ ಪಕ್ಷದ ಕದ ತಟ್ಟಿಲ್ಲ. ನಮ್ಮ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ನೀಡುವ ಸಲಹೆ, ಅಭಿಪ್ರಾಯಗಳನ್ನು ಮಾ.೨೯ ಬಳಿಕ ಬಾಗಲಕೋಟೆ ಮತಕ್ಷೇತ್ರದಲ್ಲಿ ವಿವಿಧೆಡೆ ಸಂಚರಿಸಿ ಸಂಗ್ರಹಿಸಲಾಗುವುದು ಎಂದರು.
    ಬಾಗಲಕೋಟೆ ಮತಕ್ಷೇತ್ರವನ್ನು ಕೇಂದ್ರಿಕರಿಸಿ ರಾಜಕೀಯ ಜೀವನ ಮುಂದುವರೆಸಲಾಗುವುದು. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವದಿಲ್ಲ ಅಂತ ಸ್ಪಷ್ಟಪಡಿಸಿದರು.

    ಮುಖಂಡರಾದ ವಿಜಯ ಸುಲಾಖೆ, ಪ್ರಶಾಂತ ಸೊನಕನಾಳ, ಶರಣು ಕೋರಿ, ಗುರು ಅನಗವಾಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts