More

    ಬೃಂದಾವನದಲ್ಲಿ ವಾಸುಕಿ ವೈಭವ್ ಗಾನಸುಧೆ!

    ಕೆ.ಆರ್.ಸಾಗರ: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಕೃಷ್ಣರಾಜ ಸಾಗರದ ಬೃಂದಾವನದಲ್ಲಿನ ದಕ್ಷಿಣ ಭಾಗದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ರಸಸಂಜೆ ಕಾರ್ಯಕ್ರಮದಲ್ಲಿ ವಾಸುಕಿ ವೈಭವ್ ಮತ್ತು ತಂಡ ಪ್ರೇಕ್ಷಕರನ್ನು ರಂಜಿಸಿತು.


    ಪ್ರಸಿದ್ಧ ಹಾಡುಗಾರ ವಾಸುಕಿ ತಮ್ಮ ತಂಡದ ಸದಸ್ಯೆ ಮಂದಾರ ಹಾಗೂ ಇತರ ಗಾಯಕರೊಂದಿಗೆ ಗಿಟಾರ್, ಜನಪದ ಶೈಲಿ ಬ್ಯಾಂಡ್, ವೆಸ್ಟ್ರನ್ ಬ್ಯಾಂಡ್, ಕೊಳಲು, ಡ್ರಮ್ ವಾದ್ಯದ ತಂಡದ ಜತೆಯಲ್ಲಿ ಚಲನಚಿತ್ರ, ಜನಪದ ಮತ್ತು ಮೈಸೂರು ಮಹಾರಾಜರ ಕುರಿತು ಹಾಡುಗಳನ್ನು ಹಾಡುವ ಮೂಲಕ ಪ್ರವಾಸಿಗರನ್ನು ರಂಜಿಸಿದರು.
    ದೋಣಿ ವಿಹಾರ ಕೇಂದ್ರದಲ್ಲಿ ನಿರ್ಮಿಸಿದ್ದ ತೇಲುವ ವೇದಿಕೆಯಲ್ಲಿ ಮೂಡಿಗೆರೆಯ ಕಲಾನೃತ್ಯ ತಂಡ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts