More

    ಬುದ್ಧ, ಬಸವ ಚಿಂತನೆ ಬದುಕಿಗೆ ಪೂರಕ

    ಚಿಕ್ಕೋಡಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದಷ್ಟೇ ವಿಶ್ವಗುರು ಬಸವಣ್ಣವರ ವಚನಗಳು ಹರಿತವಾಗಿವೆ. ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

    ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಯ ಸ್ವರ್ಣ ಮಹೋತ್ಸವ ಹಾಗೂ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸುಮಾರು 40 ಸಾವಿರ ದೇವದಾಸಿಯರಿದ್ದಾರೆ. ಈ ದೇವದಾಸಿ ಪದ್ಧತಿಗೆ ದಲಿತ ಹೆಣ್ಣು ಮಕ್ಕಳು ಯಾಕೆ ಬಲಿಯಾದರು ಎಂಬುದನ್ನು ಅಧ್ಯಯನ ಮಾಡಬೇಕು. ಅಷ್ಟೇ ಅಲ್ಲ ಈ ಅನಿಷ್ಟ ಪದ್ಧತಿ ನಿವಾರಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ದೇವದಾಸಿ ಪದ್ಧತಿ ತಡೆಗೆ ಕಾನೂನಿನಲ್ಲಿ ಅವಕಾಶಗಳಿದ್ದು, ಇದಕ್ಕೆ ಹೆಣ್ಣು ಮಕ್ಕಳು ಬಲಿಯಾಗುವುದು ನಿಮ್ಮ ಗಮನಕ್ಕೆ ಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

    ಶಾಸಕ ಗಣೇಶ ಹುಕ್ಕೇರಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಎ.ಬಿ.ಪಾಟೀಲ, ವೀರಕುಮಾರ ಪಾಟೀಲ, ಕಾಕಾಸಾಹೇಬ ಪಾಟೀಲ, ಅಶೋಕ ಅಸೋದೆ, ರಾಜು ವಡ್ಡರ, ಲಕ್ಷ್ಮಣರಾವ್ ಚಿಂಗಳೆ, ಅಜಿತ ಮಳಕಾರಿ, ಉತ್ತಮ ಪಾಟೀಲ, ಕುಮಾರ ಪಾಟೀಲ, ರಾಕೇಶ ಚಿಂಚಣಿ, ಸತೀಶ ಪಾಟೀಲ, ವಾಸು ಗಾವಡೆ, ಸಂತೋಷ ಅಂಕಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts