More

    ಬಿಡುವು ನೀಡಿದ ಮಳೆರಾಯ

    ಮೂಡಿಗೆರೆ: ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಗುರುವಾರ ಕೊಂಚ ಬಿಡುವು ನೀಡಿದೆ. ಕಾಫಿ ತೋಟದಲ್ಲಿ ಧರೆಗುರುಳಿದ ಮರಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಭತ್ತದ ಗದ್ದೆಯಲ್ಲಿ ರೈತರು ಬೇಸಾಯದಲ್ಲಿ ತೊಡಗಿದ್ದಾರೆ. ಬುಧವಾರದ ಮಳೆಯಿಂದ ಶಾಲೆ ಕಾಲೇಜಿಗೆ ರಜೆ ನೀಡಬೇಕೆಂದು ಸಾರ್ವಜನಿಕರು ಜಾಲತಾಣದಲ್ಲಿ ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದರು. ಶಾಲೆ ಕಾಲೇಜಿಗೆ ರಜೆ ಘೋಷಣೆಗೆ ತಹಸೀಲ್ದಾರ್ ತಿಪ್ಪೇಸ್ವಾಮಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಶಿಾರಸ್ಸು ಮಾಡಿದ್ದರು. ಆದರೆ ತಹಸೀಲ್ದಾರ್ ಶಿಾರಸ್ಸನ್ನು ಕಡೆಗಣಿಸಿರುವ ಜಿಲ್ಲಾಧಿಕಾರಿ ಅಂಗನವಾಡಿಗೆ ಮಾತ್ರ ರಜೆ ಘೋಷಿಸಿದ್ದರು.
    ಹೆಸಗಲ್ ಗ್ರಾಮದ ಗೀತಾ, ತಳವಾರ ಗ್ರಾಮದ ಮಂಜುಳಾ, ಜಿ.ಅಗ್ರಹಾರ ಗ್ರಾಮದ ಲೋಕೇಶ್, ಕೆಳಜನ್ನಾಪುರದ ತಮ್ಮಣಿ, ಅಂಗಡಿ ಗ್ರಾಮದ ಕುಮಾರ ಎಂಬುವರ ಮನೆಗಳು ಕುಸಿದಿವೆ. ಮಳೆ ಹಾನಿ ಪ್ರದೇಶಕ್ಕೆ ತಹಸೀಲ್ದಾರ್ ತಿಪ್ಪೇಸ್ವಾಮಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಮರಗಳು ಬಿದ್ದು ತಾಲೂಕಿನಲ್ಲಿ 24 ವಿದ್ಯುತ್ ಕಂಬಗಳು ತುಂಡಾಗಿವೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್‌ಲೈನ್ ಸರಿಪಡಿಸಲು ಪರದಾಡುತ್ತಿದ್ದಾರೆ. ಊರುಬಗೆ, ಹೊಸಕೆರೆ, ಬೈರಾಪುರ, ಸತ್ತಿಗನಹಳ್ಳಿ, ಏರಿಕೆ, ಗೌಡಳ್ಳಿ, ಹಳೇಕೆರೆ, ದೇವರುಂದ, ಕನ್ನೆಹಳ್ಳಿ, ತಳವಾರ, ಬೈರಿಗದ್ದೆ, ಬಾನಹಳ್ಳಿ, ಕುಂದೂರು ಭಾಗದಲ್ಲಿ ಒಂದು ವಾರದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಮಳೆ ನೀರನ್ನು ಜನ ಕುಡಿಯಲು ಬಳಸಿದ್ದರು. ಗುರುವಾರ ಮಳೆ ಬಿಡುವು ನೀಡಿದ್ದರಿಂದ ಜನ ದೂರದಿಂದ ನೀರು ಹೊತ್ತು ತರಬೇಕಾಗಿದೆ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts